– ಬೆಂಗಳೂರಲ್ಲಿ ನೀರಿನ ದರ ಹೆಚ್ಚಳಕ್ಕೂ ಪ್ಲಾನ್
ಬೆಂಗಳೂರು: ಗ್ಯಾರಂಟಿಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸಿದ್ದರಾಮಯ್ಯ (Siddaramaiah) ಸರ್ಕಾರ ಹೊಸ ಹೊಸ ದಾರಿ ಹುಡುಕ್ತಿದೆ.
ಮೊನ್ನೆಯಷ್ಟೇ ತೈಲ ದರ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರು ಸುತ್ತಲಿನ 25 ಸಾವಿರ ಎಕರೆ ಸರ್ಕಾರಿ ಜಮೀನನ್ನು ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಜಮೀನುಗಳ ನಗದೀಕರಣ ಅಥ್ವಾ ರಾಜ್ಯ ನಿರ್ದೇಶಿತ ನಗರೀಕರಣ ಮಾದರಿಗಳ ಮೂಲಕ ವರಮಾನ ಹೆಚ್ಚಿಸಿಕೊಳ್ಳಬಹುದು ಎಂದು ಬಾಸ್ಟನ್ ಎಂಬ ಕಂಪನಿ ಪ್ರಾಥಮಿಕ ವರದಿ ಸಲ್ಲಿಸಿದೆ ಎಂದು ಹೇಳಲಾಗಿದೆ.
ಆದರೆ ನಾವು ಆಸ್ತಿಗಳನ್ನು ಅಡ ಇಡ್ತಿಲ್ಲ. ನಮ್ಮ ಆಸ್ತಿಗಳನ್ನು ರಕ್ಷಣೆ ಮಾಡಲು ಈ ಕ್ರಮ ಎಂದು ಡಿಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಸಾಲದೆಂಬಂತೆ ಸದ್ಯದಲ್ಲೇ ಬೆಂಗಳೂರಲ್ಲಿ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ನಿರೀಕ್ಷೆಯಂತೆ ವಿಪಕ್ಷಗಳಿಗೆ ಆಹಾರವಾಗಿದೆ. ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಸಿದ್ದರಾಮಯ್ಯ ಗರಂ
ವಿಪಕ್ಷಗಳು ಗರಂ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ವಿರೋಧಿಸಿ ರಾಜ್ಯದ ವಿವಿಧೆಡೆ ಬಿಜೆಪಿ ಪ್ರತಿಭಟನೆಗಳನ್ನು ಮುಂದುವರಿಸಿದೆ. ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಪ್ಪಳ ಹೀಗೆ ಎಲ್ಲಾ ಕಡೆ ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಮಧ್ಯೆ ನಿನ್ನೆ ಪ್ರತಿಭಟನೆ ವೇಳೆ ಸಿಎಂ ಟೀಕಿಸಿದ್ದ ಸಿಟಿ ರವಿ ವಿರುದ್ಧ ಹುಬ್ಬಳ್ಳಿ ಉಪನಗರ ಠಾಣೆಗೆ ಕಾಂಗ್ರೆಸ್ ದೂರು ನೀಡಿದೆ. ಸಿಎಂಗೆ ಅಗೌರವ ತೋರಿದ್ದಾರೆ.. ಹೀಗಾಗಿ, ಸಿಟಿ ರವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸಬೇಕು ಎಂದು ಕೋರಿದೆ.
ಬಿಜೆಪಿ ಪ್ರತಿಭಟನೆಯನ್ನು ಕಾಂಗ್ರೆಸ್ ದೂಷಿಸಿದೆ. ಜನ ದಂಗೆ ಏಳಬೇಕು ಎಂಬ ಹೆಚ್‍ಡಿಕೆ ಕರೆಗೆ ಡಿಸಿಎಂ ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ತಮ್ಮ ಹೇಳಿಕೆಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಗರಂ ಆಗಿದ್ದಾರೆ.