ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ

Public TV
2 Min Read
darshan 2 3

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ರಾಬರ್ಟ್, ಹೆಬ್ಬುಲಿ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ‘ರಾಬರ್ಟ್’ ಸಿನಿಮಾ ವೇಳೆ ಆ ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು ಎಂದು ಉಮಾಪತಿ (Umapathy Srinivas) ಹೇಳಿದ್ದಾರೆ.

umapathy srinivas

ಕೆಲವು ಫ್ಯಾನ್ಸ್ ನಮ್ಮ ಬಾಸ್ ಜೊತೆ ನೀವು ಸಿನಿಮಾ ಮಾಡಿದ್ದೀರಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದರು. ಈಗ ಹೇಳ್ತೀನಿ, ನಾನು ದುಡ್ಡು ಮಾಡಿದ ಮೇಲೆ ನಿಮ್ಮ ಬಾಸ್‌ಗೆ ದುಡ್ಡು ಕೊಟ್ಟು ಸಿನಿಮಾ ಮಾಡಿರೋದು. ಆ ಲ್ಯಾಂಬೋರ್ಗಿನಿ ಅಂತ ಮೂರೊತ್ತು ಅಂತಾರಲ್ವಾ ಅದಕ್ಕೆ ಅಡ್ವಾನ್ಸ್ ಕೊಟ್ಟಿದ್ದೇ ನಾನು ಎಂದಿದ್ದಾರೆ.  ಅವರ ದುಡ್ಡು ಅವರಿಗೆ ಕೊಟ್ಟಿದ್ದೀನಿ. ನಾನೇನು ಬಿಟ್ಟಿ ಕೆಲಸ ಮಾಡಿಸಿಕೊಂಡಿಲ್ಲ. ಅವರು ಏನು ಬೆಲೆ ಕೊಟ್ಟಿದ್ದಾರೋ ಅದಕ್ಕೆ ತಕ್ಕಂತೆ ಕೆಲಸ ತಗೊಂಡಿದ್ದೀನಿ ಎಂದು ದರ್ಶನ್ ಕುರಿತು ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಕಲ್ಕಿ’ ಸಿನಿಮಾದ ಭೈರವ ಆಂಥಮ್ ರಿಲೀಸ್: ಕುಣಿದ ಪ್ರಭಾಸ್ ಫ್ಯಾನ್ಸ್

ಈ ಹಿಂದೆ ‘ಕಾಟೇರ’ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಮಾತನಾಡಿದ್ದರು. ಆಗ ಅಯ್ಯೋ ತಗಡೇ ಎಂದು ಉಮಾಪತಿಗೆ ದರ್ಶನ್ ತಿರುಗೇಟು ನೀಡಿದ್ದರು. ಆಗ ತಗಡಿಗೂ ಚಿನ್ನದ ಬೆಲೆ ಬರುತ್ತದೆ ಎಂದು ಉಮಾಪತಿ ಹೇಳಿಕೆ ನೀಡಿದ್ದರು. ಇದೀಗ ರೇಣುಕಾಸ್ವಾಮಿ ಪ್ರಕರಣದ ವಿಚಾರವಾಗಿ ಅರೆಸ್ಟ್ ಆಗುತ್ತಿದ್ದಂತೆ ತಗಡಿಗೂ ಚಿನ್ನದ ಬೆಲೆ ಬರುತ್ತದೆ ಎಂದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಇದರ ಬಗ್ಗೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ.

ತಗಡು ವಿಚಾರಕ್ಕೆ ನಾನೇನು ಉತ್ತರ ಕೊಡಬೇಕು ಅಂತಾ ಏನಿಲ್ಲ. ನಾನು ಪ್ರತಿ ದಿನ ಬೆಳೆಯಬೇಕು. ಉತ್ತುಂಗ ಸ್ಥಾನಕ್ಕೆ ಹೋಗಬೇಕು ಎಂಬುದು ಬಿಟ್ಟರೇ ಯಾರಿಗೂ ತೊಂದರೆ, ದ್ವೇಷ ಸಾಧಿಸುವ ಯೋಚನೆ ನನಗಿಲ್ಲ. ರೋಡ್‌ನಲ್ಲಿ ಯಾರೋ ಬೊಗಳ್ತಾರೆ ಅಂತಾ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಮ್ಮನ್ನು ಒಂದು ಕುಟುಂಬವಿದೆ. ನಮ್ಮ ಬೆಳವಣಿಗೆಯಲ್ಲಿ ಹಲವರ ಪಾತ್ರವಿದೆ. ಅದನ್ನು ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ದರ್ಶನ್‌ಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ.

ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ `ರಾಬರ್ಟ್’ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.

Share This Article