‘ಎಣ್ಣೆ ಪಾರ್ಟಿ’ಗೆ ಮುಂದಾದ ದ್ವಂದ್ವ ಟೀಮ್

Public TV
1 Min Read
Enne Party 2

ಶಸ್ವಿ ’ದ್ವಂದ್ವ’ ಚಿತ್ರತಂಡದಿಂದ ಈಗ ’ಎಣ್ಣೆ ಪಾರ್ಟಿ’ (Enne Party) ಸಿನಿಮಾವೊಂದು ಸೆಟ್ಟೇರಿದೆ. ಶುಕ್ರವಾರ ಶುಭದಿನದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಕಾಮನ್ ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಪ್ರದೀಪ್ ಕುಮಾರ್.ಕೆ ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಧನಂಜಯ್‌ನಾಗರಾಜು ಕೆಲಸವನ್ನು ಮೆಚ್ಚಿದ ನಿರ್ದೇಶಕ ಭರತ್.ಎಲ್ ಈ ಬಾರಿ ತಮ್ಮೊಂದಿಗೆ ಆಕ್ಷನ್ ಕಟ್ ಹೇಳಲು ಸೇರಿಸಿಕೊಂಡಿದ್ದಾರೆ.

Enne Party 1

ಪ್ರೀತಿ ಎನ್ನುವುದು ವಿಶ್ವದಾದ್ಯಂತ ಇರುತ್ತದೆ. ಅದೇ ರೀತಿ ಎಣ್ಣೆ ಸಹ ಯೂನಿವರ್ಸಲ್ ಆಗಿದೆ. ನಾಲ್ಕು ಯುವ ಜೋಡಿಗಳ ಸುತ್ತ ಕಥೆಯು ಸಾಗುತ್ತದೆ. ಶ್ರೀಮಂತರು, ಬಡವರು ಎಣ್ಣೆಯನ್ನು ಕುಡಿತಾರೆ. ಆದರೆ ಒಳಗಡೆ ಹೋದಾಗ ಅವರುಗಳು ಯಾವ ರೀತಿ ವರ್ತಿಸುತ್ತಾರೆ. ಕುಡಿತ ಒಳ್ಳೇದು, ಕೆಟ್ಟದು ಅಂತ ವಿಶ್ಲೇಷಿಸದೆ, ಮಿತಿಯೊಳಗೆ ಸೇವಿಸಿದರೆ ಅನಾಹುತ ಸಂಭವಿಸುದಿಲ್ಲ. ಮೀರಿದರೆ ಏನಾಗುತ್ತದೆ ಎನ್ನುವಂತಹ ಅಂಶಗಳನ್ನು ಹೆಕ್ಕಿಕೊಂಡು ಮನರಂಜನೆ, ಹಾಸ್ಯ, ಥ್ರಿಲ್ಲರ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕುಡಿಯೊದೇ ಜೀವನ ಅಂತ ಕೆಲವರ ನಂಬಿಕೆ. ಅಂತರಾಳದಲ್ಲಿ ಹೊಕ್ಕಾಗ ಕುಡಿತದಲ್ಲಿ ಬದುಕು ಇರುತ್ತದೆ ಎಂಬ ಸಂದೇಶವನ್ನು ಹೇಳಲಾಗುತ್ತಿದೆ. ಶೀರ್ಷಿಕೆ ಇಟ್ಟುಕೊಂಡು ಅದಕ್ಕೆ ಹೊಂದುವಂತಹ ಕಥೆಯನ್ನು ನಿರ್ದೇಶಕರುಗಳು ಸಿದ್ದಪಡಿಸಿಕೊಂಡಿದ್ದಾರಂತೆ.

ಹೊಸ ಪ್ರತಿಭೆಗಳಾದ ಶೋಬನ್, ಸಂತೋಷ್, ಪ್ರೀತಿ, ಮಂಜುಳಾ, ವರುಣ್, ಮಂಜು ಸುವರ್ಣ, ರಾಮು ಕೊನ್ನಾರ್, ಅಪ್ಪು ರಾಜ್, ರಶ್ಮಿ, ಗ್ರೀಷ್ಮ, ದಿವ್ಯ, ವೈಶಾಖ ಇನ್ನಿತರರು ತಾರಬಳಗದಲ್ಲಿ ಇದ್ದಾರೆ. ನಾಲ್ಕು ಎಣ್ಣೆ ಹಾಡುಗಳಿಗೆ ಆಕಾಶ್ ಪರ್ವ ಸಂಗೀತ, ರಾಜ್‌ಕಾಂತ್.ಕೆ ಛಾಯಾಗ್ರಹಣ ಇರಲಿದೆ. ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Share This Article