ಕನ್ನಡದ ‘ದಿ ವಿಲನ್’ (The Villain) ಸಿನಿಮಾ ಮೂಲಕ ಗಮನ ಸೆಳೆದ ಆ್ಯಮಿ ಜಾಕ್ಸನ್ (Amy Jackson) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಗೆ ನಟಿ ರೆಡಿಯಾಗಿದ್ದಾರೆ. ಸದ್ಯ ಅದ್ಧೂರಿಯಾಗಿ ಬ್ಯಾಚುರಲ್ ಪಾರ್ಟಿ ಮಾಡಿದ್ದಾರೆ. ಇದರ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
ಈ ವರ್ಷ ಜನವರಿಯಲ್ಲಿ ನಟ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ಎಂಗೇಜ್ ಆಗಿರೋದಾಗಿ ಅಧಿಕೃತವಾಗಿ ನಟಿ ಘೋಷಿಸಿದರು. 2022ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಹೊಸ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಮಲಯಾಳಂ ನಟಿ ರಚನಾ
ಇದೀಗ ಫ್ರಾನ್ಸ್‌ನಲ್ಲಿ ಸ್ನೇಹಿತರ ಜೊತೆ ಬ್ಯಾಚುರಲ್ ಪಾರ್ಟಿ ಮಾಡಿದ್ದಾರೆ. ಖಾಸಗಿ ಜೆಟ್‌ನಲ್ಲಿ ಪಾರ್ಟಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಧು ಎಂದು ಅಡಿಬರಹ ನೀಡಿದ್ದಾರೆ.
ಬ್ಯಾಚುರಲ್ ಪಾರ್ಟಿ ಮಾಡುತ್ತಿರುವ ನಟಿ ಆ್ಯಮಿ ಮದುವೆ ಯಾವಾಗ? ಎಂಬುದು ಇನ್ನೂ ರಿವೀಲ್ ಆಗಿಲ್ಲ. ಸದ್ಯ ದಿ ವಿಲನ್ ನಾಯಕಿಯ ಖಾಸಗಿ ಬದುಕಿನ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.
ಅಂದಹಾಗೆ, 2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು.
ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.