ಗಂಡಸರನ್ನು ನಂಬಲು ಭಯವಾಗುತ್ತದೆ ಎಂದ ಅಭಿಮಾನಿಗೆ ರಶ್ಮಿಕಾ ಸಲಹೆ

Public TV
1 Min Read
rashmika mandanna 5

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಳೆದ ವರ್ಷ ನಟಿಸಿದ ‘ಅನಿಮಲ್’ (Animal) ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಈ ಚಿತ್ರದ ರಣ್‌ಬೀರ್ (Ranbir Kapoor) ಮತ್ತು ರಶ್ಮಿಕಾ (Rashmika Mandanna) ಪಾತ್ರದ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಎರಡು ಬಂದಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೀರೋ ರಣ್‌ವಿಜಯ್ ಅಕ್ರಮ ಸಂಬಂಧದ ಬಗ್ಗೆ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ಇಂತಹ ಗಂಡಸರನ್ನು ಕಂಡರೆ ಭಯವಾಗುತ್ತದೆ ಎಂದಿದ್ದಾರೆ. ಆ ಅಭಿಮಾನಿಗೆ ರಶ್ಮಿಕಾ ಸಲಹೆ ನೀಡಿದ್ದಾರೆ.

rashmika mandanna 4

‘ಅನಿಮಲ್’ ಸಿನಿಮಾದಲ್ಲಿ ನಾಯಕ ರಣ್‌ವಿಜಯ್ ಸಿಂಗ್ ಪತ್ನಿ ಗೀತಾಂಜಲಿ ಆಗಿ ರಶ್ಮಿಕಾ ಮಿಂಚಿದ್ದರು. ಇನ್ನು ರಣ್‌ವಿಜಯ್ ಸಿಂಗ್ ಮದುವೆ ಬಳಿಕ ಜೊಯಾ ರಿಯಾಜ್ ಜೊತೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿ ವಿಡಿಯೋವೊಂದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು, ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಂಕರವಾದದ್ದು ಮತ್ತೊಂದಿಲ್ಲ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

ಈ ಕಾಮೆಂಟ್ ರಶ್ಮಿಕಾ ಮಂದಣ್ಣ ಗಮನಕ್ಕೂ ಬಂದಿದ್ದರು, ನೀವು ಹೇಳಿದ್ದಕ್ಕೆ ಸಣ್ಣ ಕರೆಕ್ಷನ್. ಒಬ್ಬ ಅವಿವೇಕಿ ಗಂಡಸನ್ನು ನಂಬಲು ಭಯವಾಗಬೇಕು. ಆದರೆ ಇಲ್ಲಿ ಸಾಕಷ್ಟು ಜನ ಒಳ್ಳೆಯ ಗಂಡಸರು ಕೂಡ ಇದ್ದಾರೆ. ಅಂತಹವರನ್ನು ನಂಬಿದರೆ ಅದು ಬಹಳ ಸ್ಪೆಷಲ್ ಎಂದು ರಶ್ಮಿಕಾ ಸಲಹೆ ನೀಡಿದ್ದಾರೆ. ಸದ್ಯ ನಟಿಯ ಕಾಮೆಂಟ್ ವೈರಲ್ ಆಗುತ್ತಿದೆ.

ಇನ್ನೂ ಪುಷ್ಪ 2, ಅನಿಮಲ್ ಪಾರ್ಕ್, ದಿ ಗರ್ಲ್‌ಫ್ರೆಂಡ್, ಚಾವಾ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

Share This Article