ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್‌ಗೈದ ದರ್ಶನ್‌ ಟೀಂ – ರೇಣುಕಾಸ್ವಾಮಿ ಕೊನೆ ಕ್ಷಣ ಹೇಗಿತ್ತು?

Public TV
2 Min Read
movie style kidnap Renukaswamy moment Darshan Team Chitradurga to Bengaluru CC TV visual 1

ಬೆಂಗಳೂರು/ ಚಿತ್ರದುರ್ಗ: ಸಿನಿಮಾ ರೀತಿಯಲ್ಲಿ ದರ್ಶನ್‌ ಗ್ಯಾಂಗ್‌ (Darshan Gang) ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು (Renukaswamy) ಅಪಹರಣ ಮಾಡಿ ಬೆಂಗಳೂರಿಗೆ ಕರೆ ತಂದು ಹತ್ಯೆ ಮಾಡಿದೆ.

ದರ್ಶನ್‌ ಗ್ಯಾಂಗ್‌ ಪ್ರತಿಯೊಂದು ಚಟುವಟಿಕೆಗೆಗಳು ಸಿಸಿ ಕ್ಯಾಮೆರಾದಲ್ಲಿ (CCTV Camera) ದಾಖಲಾಗಿದ್ದು ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷ್ಯವಾಗಿ ಪರಿಗಣನೆಯಾಗಲಿದೆ.

movie style kidnap Renukaswamy moment Darshan Team Chitradurga to Bengaluru CC TV visual 2

ಜೂನ್‌ 8 ರ ಬೆಳಗ್ಗೆ 9:48ರ ವೇಳೆಗೆ ಸ್ಕೂಟಿಯಲ್ಲಿ ರೇಣುಕಾಸ್ವಾಮಿ ತೆರಳಿದ್ದರು. ಈ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್‌ ಅಭಿಮಾನಿ ಸಂಘದ ಅಧ್ಯಕ್ಷ ರಘು ಮತ್ತು ಇತರರು ಆತನನ್ನು ಹಿಂಬಾಲಿಸಿದ್ದಾರೆ. ಚಳ್ಳಕೆರೆ ಗೇಟ್ ಕಡೆಯಿಂದ ಅಪೊಲೋದತ್ತ ತೆರಳುತ್ತಿದ್ದಾಗ ರೇಣುಕಾಸ್ವಾಮಿಯನ್ನು ದರ್ಶನ್‌ ಗ್ಯಾಂಗ್‌ ನಂಬಿಸಿದೆ. ನಂತರ ರಿಕ್ಷಾದಲ್ಲಿ ಕೂರಿಸಿ ಕುಂಚಿಗನಾಳ್ ಬಳಿ ಕಾರ್‌ಗೆ ಶಿಫ್ಟ್ ಮಾಡುವ ಮೂಲಕ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ್ದಾರೆ.

ಬಾಡಿಗೆಗೆ ಎಂದು ಹೇಳಿ ತಂದಿದ್ದ ರವಿ ಕಾರಿನಲ್ಲಿ ಕಿಡ್ನಾಪ್‌ ಮಾಡಿದ್ದಾರೆ. ಅಂದು ಬೆಳಗ್ಗೆ 11:56ರ ಸುಮಾರಿಗೆ ಕಾರು ಹತ್ತಿಸಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದರ್ಶನ್ ಇರೋ ಪೊಲೀಸ್ ಠಾಣೆ ಬಳಿ 144 ಸೆಕ್ಷನ್- ವಾಹನ ಸವಾರರ ಪರದಾಟ

movie style kidnap Renukaswamy moment Darshan Team Chitradurga to Bengaluru CC TV visual 3

ರೇಣುಕಾಸ್ವಾಮಿಯ ಕೊನೆ ಕ್ಷಣ ಹೀಗಿತ್ತು
ಜೂ.8 : ಬೆಳಗ್ಗೆ 9:48 – ಚಿತ್ರದುರ್ಗ ಹೈವೇಗೆ ರೇಣುಕಾ
ಜೂ.8: ಬೆಳಗ್ಗೆ 10:33 – ರೇಣುಕಾ ಕಿಡ್ನ್ಯಾಪ್ – (ಆಟೋದಲ್ಲಿ ಕರೆದೊಯ್ದ ಆರೋಪಿಗಳು)
ಜೂ.8: ಬೆಳಗ್ಗೆ 10:56 – ಬೆಂಗಳೂರು ಕಡೆಗೆ ರೇಣುಕಾ – ಕಾರಿನಲ್ಲಿ ಕರೆದೊಯ್ದ ಜಗ್ಗ, ರಾಘು, ಅನು
ಜೂ.8: ಮಧ್ಯಾಹ್ನ 1:15 – ತುಮಕೂರಿಗೆ ಆಗಮನ – ಆಹಾರ ಸೇವಿಸಿದ ಆರೋಪಿಗಳು
ಜೂ.8: ಮಧ್ಯಾಹ್ನ 2:30 – ಆರ್.ಆರ್.ನಗರ ಶೆಡ್‌ಗೆ ಬಂದ ಕಾರು
ಜೂ.8 : ಮಧ್ಯಾಹ್ನ 3:30 – ಶೆಡ್‌ಗೆ ದರ್ಶನ್ ಆಗಮನ
ಜೂ.8: ಮಧ್ಯಾಹ್ನ 3:45 – ದರ್ಶನ್ ಮತ್ತು ಗ್ಯಾಂಗ್‌ನಿಂದ ಹಲ್ಲೆ
ಜೂ.8: ಸಂಜೆ 6:00 – ತೀವ್ರ ಅಸ್ವಸ್ಥರಾಗಿ ರೇಣುಕಾ ಸಾವು
ಜೂ.8 : ರಾತ್ರಿ 8:00 – ಶವ ಸಾಗಾಟಕ್ಕೆ ಯತ್ನ – ಶವ ಸಾಗಾಟಕ್ಕೆ ಒಪ್ಪದ ಎ8 ಆರೋಪಿ ರವಿ
ಜೂ.9 : ಮುಂಜಾನೆ 3:35 – ಶೆಡ್‌ನಿಂದ ಶವ ಸಾಗಾಟ
ಜೂ.9 : ಮುಂಜಾನೆ 3:45 – ಸುಮ್ಮನಹಳ್ಳಿ ಬಳಿ ಶವ ಎಸೆದ ಆರೋಪಿಗಳು

ಜೂನ್ 2ರಂದೇ ಬೆದರಿಕೆ ಕರೆ?
ಜೂನ್‌ 2 ರಂದು ರೇಣುಕಾಸ್ವಾಮಿ ಅಪೊಲೋ ಫಾರ್ಮಸಿಯಿಂದ ಹೊರಬಂದು ಮಾತಾಡಿದ್ದರು. ಮಧ್ಯಾಹ್ನ 2:15 ರಿಂದ 2:40ರವರೆಗೆ ಸ್ಕೂಟಿಯಲ್ಲಿ ಕುಳಿತುಕೊಂಡೇ ಫೋನಲ್ಲಿ ಮಾತಾಡಿದ್ದರು. ಫೋನ್ ಕರೆ ಬಳಿಕ ರೇಣುಕಾಸ್ವಾಮಿ ಬಹಳ ವಿಚಲಿತನಾದಂತೆ ಕಂಡು ಬಂದಿದ್ದರು. ಫೋನಿನಲ್ಲಿ ಮಾತನಾಡುತ್ತಿದ್ದ ದೃಶ್ಯ ಸಮಿಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share This Article