ಬೆಂಗಳೂರು: ಎತ್ತಿನಹೊಳೆ (Yettinahole Project) ಯೋಜನೆಗೆ ಇರುವ ಸಮಸ್ಯೆ ನಿವಾರಿಸಲು ಜಲಸಂಪನ್ಮೂಲ, ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಜಲಸಂಪನ್ಮೂಲ ಇಲಾಖೆಯ ಸಭೆ ಬಳಿಕ ಮಾತನಾಡಿದ ಅವರು, ಎತ್ತಿನಹೊಳೆಯಲ್ಲಿ ಏನೆಲ್ಲ ಸಮಸ್ಯೆ ಇದೆ. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತ್ಯೇಕವಾದ ಸರ್ವೇ ಮಾಡುತ್ತೇವೆ. ಕಂದಾಯ ಹಾಗೂ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನಿಂದ ಪ್ರತ್ಯೇಕ ಸರ್ವೇ ಮಾಡುತ್ತೇವೆ. ಜಂಟಿ ಸರ್ವೇ ಸಹಾ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನೂ ಸ್ಟೇಷನ್‌ಗೆ ಮರೆಮಾಚಿ ಕರೆದುಕೊಂಡು ಹೋಗ್ತಿದ್ರು – ಜೈಲಿನ ಅನುಭವ ಬಿಚ್ಚಿಟ್ಟ ಡಿಕೆಶಿ
- Advertisement
ಎತ್ತಿನಹೊಳೆ ಪ್ರಾಜೆಕ್ಟ್‌ನಲ್ಲಿ 50 ಕೋಟಿ ಹಣ ರೈತರಿಗೆ ಕೊಡಬೇಕಾಗಿತ್ತು. ಈಗಾಗಲೇ 10 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಆದರೆ ಕೆಲವು ಜಾಗ ಅರಣ್ಯ ಇಲಾಖೆ ನಮ್ದೇ ಅಂತಾ ಹೇಳ್ತಿದ್ದಾರೆ. ಹೀಗಾಗಿ ಇದನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ಚರ್ಚೆ ಮಾಡುತ್ತಾರೆ. ನೀರನ್ನು ಹೊರಗಡೆ ತೆಗೆದು ತೋರಿಸಬೇಕು ಎಂದು ಹೇಳಿದ್ದೇನೆ. ಮೊದಲ ಹಂತದಲ್ಲಿ 45 ಕಿಮೀ ವರೆಗೂ ನೀರು ಹರಿಸಬೇಕು ಎಂದಿದ್ದಾರೆ.
- Advertisement
ಸಮುದ್ರ ಸೇರುವ ನೀರು ಎತ್ತಿನಹೊಳೆ ಪ್ರಾಜೆಕ್ಟ್‌ಗೆ ತರಲು ಸಾದ್ಯ ಇದೆಯಾ ಅಂತಾ ನೋಡಲು ಸ್ಪೆಷಲ್ ಟೆಕ್ನಿಕಲ್ ಟೀಮ್ ರಚನೆ ಮಾಡುತ್ತೇವೆ. ಯಾವ ಕಡೆ ನೀರು ಸಮುದ್ರಕ್ಕೆ ಸೇರುತ್ತಿದೆ, ಅದನ್ನು ಗಮನಕ್ಕೆ ತರುವಂತೆ ಒಂದು ಟೀಮ್ ರಚನೆ ಮಾಡುಲು ಹೇಳಿದ್ದೇನೆ. ಇನ್ನೂ ಟೆಕ್ನಿಕಲ್ ಟೀಮ್ ರಚನೆ ಮಾಡಿಲ್ಲ. ಎತ್ತಿನಹೊಳೆಗೆ ಎಲ್ಲಿಂದೆಲ್ಲಾ ನೀರು ತರಲು ಸಾಧ್ಯವೋ, ಎಲ್ಲಾ ಕಡೆಯಿಂದಲೂ ಪ್ಲಾನ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದರ್ಶನ್ ಕೊಲೆ ಮಾಡಿದ್ದರೆ ದೊಡ್ಡ ತಪ್ಪು – ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ನೆರವಾಗಲಿ: ಅಶೋಕ್