ಮಹಾರಾಷ್ಟ್ರದಿಂದ ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ; ಬೀದರ್‌ ರೈತರ ಜಮೀನುಗಳಿಗೆ ನುಗ್ಗಿದ ನೀರು

Public TV
1 Min Read
Bidar Rain Effect

ಬೀದರ್: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ (Maharashtra) ಮಾಣಿಕ್ಯ ಡ್ಯಾಂ ನಿಂದ ಯಾರಿಗೂ ತಿಳಿಸದ ಜಿಲ್ಲೆಯ ಮಾಂಜ್ರಾ ನದಿಗೆ (Manjra River) ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.

ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಬೀದರ್ (Bidar) ಜಿಲ್ಲೆಯ ಹೂಲಸೂರಿ ಪಟ್ಟಣದ ಹೊರವಲಯದಲ್ಲಿರುವ ಕೋಂಗಳಿ ಬ್ರಿಜ್ ಕಂ ಬ್ಯಾರೇಜ್‌ನ ಬಾಗಿಲು ತೆರೆಯದ ಕಾರಣ ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ‌‌‌. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

Bidar Rain Effect 1

ಹುಲಸೂರು ತಾಲೂಕಿನ ಮಾಂಜ್ರಾ ನದಿ ದಡದಲ್ಲಿರುವ ಕೋಂಗಳಿ, ಜಾಮಖಂಡಿ, ವಾಂಜರಖೇಡ, ಹಲಸೂರು ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ವಿದ್ಯುತ್ ಬಿಲ್ ಕಟ್ಟಲಾಗದ ಕಾರಣ ಕೋಂಗಳಿ ಬ್ರಿಜ್‌ಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. ವಿದ್ಯುತ್ ಇಲ್ಲದೆಯೇ ಬ್ಯಾರೇಜ್ ಬಾಗಿಲು ತೆರೆಯಲು ಲೇಟಾದ ಕಾರಣ ಜಮೀನುಗಳಿಗೆ ನೀರು ನುಗ್ಗಿ‌ದೆ.‌

ಮಾಂಜ್ರಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೋಂಗಳಿ ಏತ ನೀರಾವರಿ ಯೋಜನೆಯ ಬ್ರೀಜ್ ಕಂ ಬ್ಯಾರೇಜ್ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಯಡಿಯೂರಪ್ಪ ಬಂಧನಕ್ಕೆ ಸಿಐಡಿ ಸಿದ್ಧತೆ!

Share This Article