ಸ್ಯಾಂಡಲ್‌ವುಡ್ ನಟಿ ಮಯೂರಿ (Mayuri) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಕಿರುತೆರೆಗೆ ‘ಕೃಷ್ಣಲೀಲಾ’ (Krishna Leela) ಖ್ಯಾತಿಯ ನಟಿ ಎಂಟ್ರಿ ಕೊಟ್ಟಿದ್ದಾರೆ. ‘ನನ್ನ ದೇವ್ರುʼ (Nana Devru) ಎಂಬ ಸೀರಿಯಲ್‌ಗೆ ನಾಯಕಿಯಾಗಿ ನಟಿ ಸದ್ದು ಮಾಡುತ್ತಿದ್ದಾರೆ.
ಮದುವೆಯಾಗಿ ಮಗುವಾದ್ಮೇಲೆ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ಫಿಟ್ ಆಗಿ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ಇದೀಗ ʻನನ್ನ ದೇವ್ರುʼ ಎಂಬ ಸೀರಿಯಲ್‌ನಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ.
ನಟ ಅವಿನಾಶ್‌ಗೆ ನಾಯಕಿಯಾಗಿ ಮಯೂರಿ ತೆರೆಹಂಚಿಕೊಳ್ತಿದ್ದಾರೆ. ಸೀರಿಯಲ್ ಪ್ರೋಮೋ ಕೂಡ ರಿವೀಲ್ ಆಗಿದ್ದು, ಹಳ್ಳಿ ಹುಡುಗಿಯ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಸೀರಿಯಲ್ ಪ್ರಸಾರದ ಬಗ್ಗೆ ಮಾಹಿತಿ ಸಿಗಲಿದೆ.
ಇನ್ನೂ ಮಯೂರಿಗೆ ಕಿರುತೆರೆಯೇನು ಹೊಸದಲ್ಲ. ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕನೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಬಳಿಕ ಸಿನಿಮಾಗಳಲ್ಲಿ ನಟಿಸಲು ಚಾನ್ಸ್ ಸಿಕ್ತು. ಕೃಷ್ಣಲೀಲಾ, ಇಷ್ಟಕಾಮ್ಯ, ನನ್ನ ಪ್ರಕಾರ, ಮೌನಂ, ಪೊಗರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.