ಲಂಡನ್: ತಮಿಳುನಾಡಿನ (Tamil Nadu) ದೇವಸ್ಥಾನದಿಂದ ಕಳ್ಳತನವಾಗಿದ್ದ 500 ವರ್ಷಗಳಷ್ಟು ಹಳೆಯದಾದ ಸಂತ ತಿರುಮಂಕೈ ಆಳ್ವರ (Thirumangai Alvar) ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸಲು ಬ್ರಿಟನ್‍ನ (Britain) ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ (Oxford University) ಕೌನ್ಸಿಲ್ ಅಶ್ಮೋಲಿಯನ್ ಮ್ಯೂಸಿಯಂನಿಂದ 15 ನೇ ಶತಮಾನದ ಸಂತ ತಿರುಮಂಕೈ ಆಳ್ವಾರ ಕಂಚಿನ ಶಿಲ್ಪವನ್ನು ಹಿಂದಿರುಗಿಸಲು ಭಾರತೀಯ ಹೈಕಮಿಷನ್‍ನ ಮನವಿಯನ್ನು ವಿಶ್ವವಿದ್ಯಾಲಯವು ಇಂದು ಒಪ್ಪಿಕೊಂಡಿದೆ. ಈ ನಿರ್ಧಾರವನ್ನು ಅನುಮೋದನೆಗಾಗಿ ಚಾರಿಟಿ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ ತಿಳಿಸಿದೆ. ಇದನ್ನೂ ಓದಿ: ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’; ಪರಿಸರ ತಜ್ಞ ಆರ್.ಕೆ.ನಾಯರ್‌ಗೆ ಸನ್ಮಾನ
60 ಸೆಂ.ಮೀ ಎತ್ತರದ ಸಂತ ತಿರುಮಂಕೈ ಆಳ್ವರ ಪ್ರತಿಮೆಯನ್ನು ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ 1967 ರಲ್ಲಿ ಡಾ ಜೆ ಆರ್ ಬೆಲ್ಮಾಂಟ್ (1886-1981) ಎಂಬ ಸಂಗ್ರಾಹಕನ ಸಂಗ್ರಹದಿಂದ ಹರಾಜಿನಲ್ಲಿ ಆಕ್ಸ್‌ಫರ್ಡ್ ಪಡೆದುಕೊಂಡಿತ್ತು. ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕೆಲವು ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯವು, 1967 ರಲ್ಲಿ ಈ ವಿಗ್ರಹವನ್ನು ಸದುದ್ದೇಶದಿಂದ ಇಲ್ಲಿ ಇರಿಸಿಕೊಂಡಿತ್ತು.
ಕಳೆದ ವರ್ಷ ನವೆಂಬರ್‍ನಲ್ಲಿ ಸ್ವತಂತ್ರ ಸಂಶೋಧಕರೊಬ್ಬರು ಪುರಾತನ ಪ್ರತಿಮೆಯ ಮೂಲದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಭಾರತಕ್ಕೆ ಈ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಭಾರತ ಬ್ರಿಟನ್‍ಗೆ ವಿಗ್ರಹ ಮರಳಿಸುವಂತೆ ಮನವಿ ಮಾಡಿತ್ತು. ಕಳುವಾದ ಭಾರತೀಯ ಕಲಾಕೃತಿಗಳನ್ನು ಯುಕೆಯಿಂದ ಭಾರತಕ್ಕೆ ತಂದ ಹಲವಾರು ನಿದರ್ಶನಗಳಿವೆ. ಇದನ್ನೂ ಓದಿ: ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ?