ನಿವೇದಿತಾ ಕೋಟ್ಯಂತರ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿಲ್ಲ: ಚಂದನ್‌ ಶೆಟ್ಟಿ

Public TV
1 Min Read
chandan shetty and niveditha gowda 3

ರ್ಯಾಪರ್ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಡಿವೋರ್ಸ್ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಡಿವೋರ್ಸ್ ಬಗ್ಗೆ ಹಲವು ವದಂತಿಗಳು ಹಬ್ಬಿತ್ತು. ಈ ಬೆನ್ನಲ್ಲೇ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಚಂದನ್ ಮತ್ತು ನಿವೇದಿತಾ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ನಿವೇದಿತಾ ಗೌಡ ಜೀವನಾಂಶ ಕೇಳಿದ್ರಾ ಹಬ್ಬಿರುವ ವದಂತಿಗೆ ಸ್ಪಷ್ಟನೆ ನೀಡಿದ್ದರು ಚಂದನ್ ಶೆಟ್ಟಿ.

chandan shetty 2

ನಮ್ಮ ನಡುವೆ ಮಗುವಿನ ವಿಚಾರಕ್ಕೆ ಕಿತ್ತಾಟ ಆಗಿಲ್ಲ. ಮಗುವಿನ ವಿಚಾರಕ್ಕೆ ನಾವಿಬ್ಬರೂ ಬೇರೇ ಆಗಿಲ್ಲ. ಇದು ಸುಳ್ಳು ಸುದ್ದಿ ಎಂದಿದ್ದಾರೆ. ನಿವೇದಿತಾ ನನ್ನ ಕಡೆಯಿಂದ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತ ವದಂತಿ ಹಬ್ಬಿದೆ. ಅವರು ಕೋಟ್ಯಂತರ ರೂಪಾಯಿ ಬೇಡಿಕೆ ಇಟ್ಟಿದ್ರೂ ಅಂತ ವದಂತಿ ಆಗಿತ್ತು. ಖಂಡಿತವಾಗಿಯೂ ಈ ವಿಚಾರ ಸುಳ್ಳು. ನಿವೇದಿತಾ ನನಗೆ ಜೀವನಾಂಶ ಕೇಳಿಯೂ ಇಲ್ಲ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

chandan shetty 1 1

ನಮ್ಮ ಇಬ್ಬರ ಜೀವನ ಶೈಲಿ ಕೂಡ ಬೇರೆ ಬೇರೆ ಇದೆ. ಇಬ್ಬರ ನಡುವೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅದನ್ನು ಸರಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಆಗಲಿಲ್ಲ. ಇಬ್ಬರೂ ಒಮ್ಮತದಿಂದ ನಿರ್ಧರಿಸಿ ಡಿವೋರ್ಸ್‌ ಪಡೆದಿದ್ದೇವೆ ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಮಗು ಮಾಡಿಕೊಳ್ಳುವ ವಿಚಾರಕ್ಕೆ ಕಿತ್ತಾಟ ಆಯ್ತಾ? ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ

chandan shetty 1

ನಾವಿಬ್ಬರೂ ಬೇರೆ ಬೇರೇ ಆದರೆನೇ ಚೆನ್ನಾಗಿ ಇರುತ್ತೇವೆ ಎಂದು ನಿರ್ಧಾರ ಮಾಡಿದ್ದೇವು. ಹಾಗಂತ ನಮ್ಮ ಇಬ್ಬರ ನಡುವೆ ದ್ವೇಷ, ಭಿನ್ನಾಭಿಪ್ರಾಯ ಏನಿಲ್ಲ ಎಂದಿದ್ದಾರೆ ಚಂದನ್. ನಿವೇದಿತಾ ಇಂದು ಚಿತ್ರರಂಗದಲ್ಲಿ ಬೆಳೆದಿರುವ ರೀತಿ ಬಗ್ಗೆ ಖುಷಿಯಿದೆ. ನನ್ನ ಕೆಲಸ ಬಗ್ಗೆಯೂ ಅವರಿಗೆ ಗೌರವವಿದೆ. ಇಬ್ಬರೂ ಗೌರವಯುತವಾಗಿಯೇ ಬೇರೆಯಾಗಿದ್ದೇವೆ ಎಂದು ಚಂದನ್ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

Share This Article