ಬೆಂಗಳೂರು: ಬೆಂಗಳೂರು ಗ್ರಾಮಾಂತರ ಸೋಲಿನಿಂದ ನಾನು ಇನ್ನೂ ಹೊರ ಬಂದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ ಹಾಕಿದವರಿಗೆ ಕೃತಜ್ಞತೆ ಸಲ್ಲಿಸೋಣ. ಮತ ಹಾಕದವರ ಹೃದಯವನ್ನೂ ಗೆಲ್ಲಬೇಕು. ಈ ಮಾತನ್ನ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ನಾವು ಓವರ್ ಕಾನ್ಫಿಡೆಂಟ್ ಆಗಿ ಇದ್ವಿ. ಅವರು ಒಳ್ಳೆಯ ಸ್ಟ್ರಾಟಜಿ ಮಾಡಿದ್ರು. ನಾನ್ ಕಾಂಟ್ರವರ್ಶಿಯಲ್ ಕ್ಯಾಂಡಿಡೇಟ್ ಹಾಕಿದ್ರು. ದಳದಿಂದ ನಿಲ್ಲಿಸಲಿಲ್ಲ, ಬಿಜೆಪಿಯಿಂದ (BJP) ಅಭ್ಯರ್ಥಿಗಳನ್ನು ಹಾಕಿದ್ರು ಎಂದರು.
ನಮಗೆ ಬರುವ ಮತಗಳು ಬಂದಿವೆ. ಅವರಿಗೆ ಒಂದೂವರೆ ಲಕ್ಷ ವೋಟು ಹೋಗಿದೆ. ಕನಕಪುರದಲ್ಲಿ 60 ಸಾವಿರ ವೋಟು ನಿರೀಕ್ಷೆ ಇತ್ತು. ಅಲ್ಲಿ 25 ಸಾವಿರ ಮತ ಮಾತ್ರ ಬಂದಿದೆ. ದೇವೇಗೌಡರು (HD Devegowda) ಸೋತಿದ್ರಲ್ಲಾ, ಕುಮಾರಸ್ವಾಮಿನೂ (HD Kumaraswamy) ಸೋತಿದ್ರಲ್ಲ. ಅವರ ಸೊಸೆಯೂ ಸೋತಿದ್ರಲ್ಲ. ನಿಖಿಲ್ (Nikhil Kumaraswamy) ಕೂಡ ಸೋತಿರಲಿಲ್ವೇ. ಈಗ ಸುರೇಶ್ ಸೋತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡಲು, ಮತ ಹಾಕದವರ ಮನಗೆಲ್ಲಲು ರಾಗಾ ಸಲಹೆ: ಡಿಕೆಶಿ