ಫ್ಯಾಷನ್ (Fashion) ಮಳಿಗೆಯಲ್ಲಿ ಇದೀಗ ಡಿಸೈನರ್ ಜುಮ್ಕಾ ಬಳೆಗಳು ಟ್ರೆಂಡಿಯಾಗಿವೆ. ಬಳೆ ಪ್ರಿಯ ಮಹಿಳೆಯರ ಕೈಗಳನ್ನು (Bangles) ಅಲಂಕರಿಸುತ್ತಿವೆ. ಜುಮ್ಕಾ ಬಳೆಗಳು (Jumka Bangles) ಸದಾ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚು ಚಾಲ್ತಿಗೆ ಬರುತ್ತವೆ. ಇದೀಗ ಟ್ರೆಡಿಷನಲ್ ಮದುವೆ ಸಮಾರಂಭಗಳು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಇವನ್ನು ಧರಿಸುವ ಮಹಿಳೆಯರು ಹೆಚ್ಚಾದಂತೆ, ನಾನಾ ಡಿಸೈನ್‌ಗಳು ಬಿಡುಗಡೆಗೊಳ್ಳುತ್ತಿವೆ.
ಅಂದಹಾಗೆ, ಕಿವಿಗೆ ಧರಿಸುವ ವೆರೈಟಿ ಡಿಸೈನ್‌ನ ಜುಮ್ಕಾಗಳು ಇದೀಗ ಬಳೆಗಳಲ್ಲಿ ನೇತಾಡುತ್ತಿವೆ. ಬಳೆಗಳಿಗೆ ಅಟ್ಯಾಚ್ ಆದಂತೆ ಅವನ್ನು ಡಿಸೈನ್ ಮಾಡಲಾಗಿರುತ್ತದೆ. ಕಡಗ, ಬಳೆಗಳ ಸೈಜಿಗೆ ತಕ್ಕಂತೆ ಜುಮ್ಕಾಗಳನ್ನು ಚೈನ್ ಮುಖಾಂತರ ಅಥವಾ ನೇರವಾಗಿ ಅಟ್ಯಾಚ್ ಮಾಡಲಾಗಿರುತ್ತದೆ. ಅವನ್ನೇ ಜುಮ್ಕಾ (Jumka) ಬಳೆಗಳೆನ್ನಲಾಗುತ್ತದೆ.
ಈ ಸೀಸನ್‌ನಲ್ಲಿ ಜುಮ್ಕಾ ಬಳೆಗಳು, ಕೇವಲ ಗೋಲ್ಡ್ ಪ್ಲೇಟೆಡ್‌ನಲ್ಲಿ ಮಾತ್ರವಲ್ಲ, ವೈಟ್ ಹಾಗೂ ಬ್ಲ್ಯಾಕ್ ಮೆಟಲ್‌ನಲ್ಲೂ ದೊರೆಯುತ್ತಿವೆ. ಇನ್ನು ಹೆಚ್ಚು ಬೆಲೆಯಾದರೂ ಪರವಾಗಿಲ್ಲ, ನೋಡಲು ಮಾತ್ರ ಚೆನ್ನಾಗಿ ಕಾಣಿಸಬೇಕು ಎನ್ನುವವರು ಸಿಲ್ವರ್ ಜ್ಯುವೆಲ್ಲರಿ ಹಾಗೂ ಆಕ್ಸಿಡೈಸ್ಡ್ ಜ್ಯುವೆಲ್ಲರಿಗಳಲ್ಲಿ ಲಭ್ಯವಿರುವ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೈಗೆಟುಕುವ ಬೆಲೆಯಿಂದಿಡಿದು ಸಾವಿರಾರು ರೂ.ಗಳಲ್ಲೂ ಈ ಜುಮ್ಕಾ ಬಳೆಗಳು ದೊರೆಯುತ್ತಿವೆ. ಇದನ್ನೂ ಓದಿ:ಸುದೀಪ್‌ಗೂ ಮುನ್ನ ಶಿವಣ್ಣಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್
ಸೆಟ್ ಬ್ಯಾಂಗಲ್ಸ್, ಸಿಂಗಲ್ ಕಡ ಅಥವಾ ಕಡಗ, ಸೈಡ್ ಬ್ಯಾಂಗಲ್ಸ್, ಸೆಂಟರ್ ಬ್ಯಾಂಗಲ್‌ಗಳಲ್ಲೂ ಜುಮ್ಕಾ ಡಿಸೈನರ್ ಬಳೆಗಳು ಬಂದಿವೆ. ಫ್ಯಾನ್ಸಿ ಶಾಪ್‌ಗಳಲ್ಲಿ ನಾನಾ ಡಿಸೈನ್‌ನಲ್ಲಿ ದೊರೆಯುತ್ತಿರುವ ಇವು, ಇದೀಗ ಆನ್‌ಲೈನ್‌ನಲ್ಲೂ ದೊರೆಯುತ್ತಿವೆ. ಹಾಗಾಗಿ ಸಾಕಷ್ಟು ಡಿಸೈನ್ ಅನ್ನು ಕಾಣಬಹುದು. ಜುಮ್ಕಾ ಬಳೆಗಳು ಟ್ರೆಡಿಷನಲ್ ಲುಕ್‌ಗೆ ಆಕರ್ಷಕವಾಗಿ ಕಾಣುವುದರಿಂದ ಅತಿ ಹೆಚ್ಚಾಗಿ ಗೋಲ್ಡ್ ಪ್ಲೇಟೆಡ್ ಜುಮ್ಕಾ ಬಳೆಗಳನ್ನು ಖರೀದಿಸುವುದು ಹೆಚ್ಚು.
ಫ್ಯಾಷನ್ ಟಿಪ್ಸ್:
* ಫಿನಿಶಿಂಗ್ ಇರುವಂತಹ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ಮೈ ಕೈಗೆ ಚುಚ್ಚಬಹುದು. ಧರಿಸುವ ಸೀರೆ ಹಾಗೂ ಔಟ್‌ಫಿಟ್‌ಗಳು ಕಿತ್ತುಹೋಗಬಹುದು.
* ಕಡದಂತ ಜುಮ್ಕಾ ಬ್ಯಾಂಗಲ್ ಆದಲ್ಲಿ ಯಾವುದೇ ಟ್ರೆಡಿಷನಲ್ ಉಡುಪಿಗೂ ಧರಿಸಬಹುದು.
* ಜುಮಕಿಗಳನ್ನು ಧರಿಸಿದಾಗ ಇವನ್ನು ಮ್ಯಾಚ್ ಮಾಡಬಹುದು.
* ಆಕ್ಸಿಡೈಸ್ಡ್ ಹಾಗೂ ಸಿಲ್ವರ್‌ನವನ್ನು ವೆಸ್ಟರ್ನ್ ಔಟ್‌ಫಿಟ್‌ಗೂ ಧರಿಸಬಹುದು.
* ಆದಷ್ಟೂ ತೀರಾ ಉದ್ದವಿರದ ಜುಮ್ಕಾ ಬ್ಯಾಂಗಲ್ಸ್ ಆಯ್ಕೆ ಮಾಡಿ.
* ಪರ್ಲ್, ಕುಂದನ್, ಸ್ಟೋನ್‌ನವು ಕೂಡ ಟ್ರೆಂಡಿಯಾಗಿವೆ.