ಅಬ್‌ಕೀ ಬಾರ್‌ ಸಮ್ಮಿಶ್ರ ಸರ್ಕಾರ್‌ – ಎನ್‌ಡಿಎ ಮೈತ್ರಿಕೂಟದ ಸಂಖ್ಯೆ 303ಕ್ಕೆ ಏರಿಕೆ!

Public TV
1 Min Read
nad modi meeting

ನವದೆಹಲಿ: ಒಟ್ಟು 293 ಸ್ಥಾನಗಳನ್ನು ಹೊಂದಿದ್ದ ಎನ್‌ಡಿಎ (NDA) ಮೈತ್ರಿಕೂಟದ ಸಂಖ್ಯೆ  ಫಲಿತಾಂಶ ಬಂದ ಎರಡೇ ದಿನದಲ್ಲಿ 303ಕ್ಕೆ ಏರಿದೆ.

7 ಮಂದಿ ಪಕ್ಷೇತರ ಸಂಸದರು, ಸಣ್ಣ ಪಕ್ಷದ ಮೂವರು ಸಂಸದರು ಎನ್‌ಡಿಎ ಸರ್ಕಾರವನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ (PM Narendra Modi) ಅವರ ನಾಯಕತ್ವಕ್ಕೆ ನಾವು ಪೂರ್ಣ ಭರವಸೆ ಇಟ್ಟಿರುವುದಾಗಿ ಇವರು ಹೇಳಿರುವುದಾಗಿ ವರದಿಯಾಗಿದೆ.

ಎನ್‌ಡಿಎ ಮೈತ್ರಿಕೂಟದ ಸಂಖ್ಯೆ ಏರಿಕೆಯಾಗಿರುವ ಬಗ್ಗೆ ಅಧಿಕೃತವಾಗಿ ಬಿಜೆಪಿ (BJP) ಕಡೆಯಿಂದ ಯಾವುದೇ ಪ್ರಕಟಣೆ ಬಂದಿಲ್ಲ. ಆದರೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ (Giriraj Singh) ಅವರ ಪೋಸ್ಟ್‌ನಿಂದ ಈ ಚರ್ಚೆ ಆರಂಭವಾಗಿತ್ತು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದಿದ್ದ ಚಲುವರಾಯಸ್ವಾಮಿ ವೀಡಿಯೋ ವೈರಲ್

NDA Leaders

ಬುಧವಾರ ಎನ್‌ಡಿಎ ನಾಯಕರ ಸಭೆಯ ಬಳಿಕ ಗಿರಿರಾಜ್‌ ಸಿಂಗ್‌ ಅವರು ನಾಯಕರ ಫೋಟೋ ಪ್ರಕಟಿಸಿ ಎನ್‌ಡಿಎ 303 ಎಂದು ಬರೆದಿದ್ದರು. ಆದರೆ ಕೆಲ ಕ್ಷಣದಲ್ಲಿ ಈ ಪೋಸ್ಟ್‌ ಡಿಲೀಟ್‌ ಮಾಡಿ ಎನ್‌ಡಿಎ 3.0 ಎಂದು ಬರೆದು ಪೋಸ್ಟ್‌ ಮಾಡಿದ್ದರು.

giriraj singh post
ಎನ್‌ಡಿಎ 303 ಎಂದು ಬರೆದು ಡಿಲೀಟ್‌ ಮಾಡಿದ ಪೋಸ್ಟ್‌

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 293, ಇಂಡಿಯಾ 233, ಇತರರು 17 ಸ್ಥಾನ ಪಡೆದಿದ್ದಾರೆ. ಲೋಕಸಭೆಯಲ್ಲಿ ಬಹುಮತ ಪಡೆಯಲು ಸರ್ಕಾರಕ್ಕೆ 272 ಸ್ಥಾನಗಳ ಅಗತ್ಯವಿದೆ.

 
ಇತರರ ಪೈಕಿ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ 4, ಮೇಘಾಲಯದ ವಿಒಟಿಟಿಪಿ 1, ಮಿಜೋರಾಂನ ಝ್‌ಪಿಎಂ, ಪಂಜಾಬ್‌ನ ಶಿರೋಮಣಿ ಅಕಾಲಿ ದಳ, ರಾಜಸ್ಥಾನದ ಆದಿವಾಸಿ ಪಾರ್ಟಿ, ತೆಲಂಗಾಣದ ಎಐಎಂಐಎಂ, ಕಾನ್ಶಿರಾಂ ಅವರ ಅಜಾದ್‌ ಸಮಾಜ್‌ ಪಾರ್ಟಿ ಸೇರಿ 7 ಮಂದಿ ಪಕ್ಷೇತರರು ಜಯಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಬರೋಬ್ಬರಿ 303 ಸ್ಥಾನ ಗೆದ್ದುಕೊಂಡಿತ್ತು.

Share This Article