ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜೂನ್ 8 ರ ರಾತ್ರಿ 8 ಗಂಟೆಯ ವೇಳೆಗೆ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಪ್ರಧಾನಿ ಮೋದಿ ಮತ್ತು ಸಂಖ್ಯೆ 8ಕ್ಕೆ (Number 8) ಅವಿನಾಭಾವ ಸಂಬಂಧವಿದೆ. ಬಹುತೇಕ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯಕ್ರಮಗಳು 8 ರಂದೇ ಆರಂಭವಾಗಿತ್ತು.
ಸಂಖ್ಯಾಶಾಸ್ತ್ರದಲ್ಲಿ 8ನೇ ಸಂಖ್ಯೆಯು ಶನಿ ಗ್ರಹವನ್ನು ಸೂಚಿಸಿದರೂ ಎಂಟನೇ ಸಂಖ್ಯೆಯು ರಾಜಯೋಗದ ಸಂಕೇತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ರಾಜ ರೀತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ರೀತಿಯ ಮಂಗಳಕರ ಯೋಗ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ
- Advertisement
ಸಂಖ್ಯಾಶಾಸ್ತ್ರದ ಪ್ರಕಾರ ಮೂಲಾಂಕ 8 ಆಗಿರುವಂತಹ ಜನರು ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತಾರೆ ಹಾಗೂ ಶನಿ ಕೂಡ ನ್ಯಾಯದ ಪ್ರಕಾರವಾಗಿ ಅವರ ಪರಿಶ್ರಮಕ್ಕೆ ತಕ್ಕಂತಹ ಪ್ರತಿಫಲವನ್ನು ಕರುಣಿಸುತ್ತಾನೆ. ಶನಿ ಉಚ್ಚಸ್ಥಾನದಲ್ಲಿದ್ದವರಿಗೆ ಯಶಸ್ಸು ತಡವಾಗಿ ಲಭಿಸುತ್ತದೆ. ಆದರೆ ಸಿಗುವ ಯಶಸ್ಸು ಬಹಳ ಶ್ರೇಷ್ಠ ಮಟ್ಟದಾಗಿರುತ್ತದೆ ಮತ್ತು ಶತ್ರುಗಳು ಇರುವುದಿಲ್ಲ.
- Advertisement
ಮೋದಿ ಸರ್ಕಾರದ ದೊಡ್ಡ ನಿರ್ಧಾರಗಳಲ್ಲಿ ಒಂದಾದ ನೋಟು ನಿಷೇಧವನ್ನು (Demonetisation) ನವೆಂಬರ್ 8 ರಂದು ರಾತ್ರಿ 8 ಗಂಟೆಗೆ ಘೋಷಿಸಲಾಗಿತ್ತು. ಸೆಪ್ಟೆಂಬರ್ 26, 2015 ರಂದು ಡಿಜಿಟಲ್ ಇಂಡಿಯಾ ಡ್ರೈವ್ ಅನ್ನು ಸಹ ಪ್ರಾರಂಭಿಸಿದರು. 2 ಮತ್ತು 6 ಸಂಖ್ಯೆಗಳನ್ನು ಕೂಡಿಸಿದರೆ 8 ಆಗುತ್ತದೆ. ಇದನ್ನೂ ಓದಿ: ಸ್ಫೋಟಕ ಟ್ವಿಸ್ಟ್ – ಡ್ರಗ್ಸ್ ಪಾರ್ಟಿಯಲ್ಲಿದ್ದ ಯುವತಿಯರಿಗೆ ಪರಿಚಯವೇ ಇರಲಿಲ್ಲ!
ಮೋದಿ ಅವರು ಸೆಪ್ಟೆಂಬರ್ 17 ರಂದು ಜನಿಸಿದ್ದಾರೆ. 1 ಮತ್ತು 7 ಸಂಖ್ಯೆಗಳನ್ನು ಕೂಡಿಸಿದರೆ 8 ಬರುತ್ತದೆ. ಭಾರತಕ್ಕೆ ಸಂಖ್ಯೆ 8 ಮಹತ್ವದ್ದಾಗಿದೆ. ಭಾರತದ ಗಣರಾಜ್ಯವಾಗಿದ್ದು ಜನವರಿ 26 ರಂದು. ಇಲ್ಲೂ 2+6 ಸೇರಿಸಿದಾಗ 8 ಆಗುತ್ತದೆ. ವರ್ಷ 2024 ಕ್ಕೂ 8ಕ್ಕೂ ಸಂಬಂಧವಿದೆ. 2+0-2+4 ಸೇರಿದಾಗ 8 ಬರುತ್ತದೆ.
ಜೂನ್ 8 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಕೇವಲ ಕಾಕತಾಳೀಯವಾಗಿರದೇ ಬಹಳ ಯೋಚನೆ ಮಾಡಿಯೇ ಮಾಡಿರಬೇಕು ಎಂಬ ವಿಶ್ಲೇಷಣೆ ಕಂಡು ಬಂದಿದೆ. ಎಂಟರಿಂದ ಧನಾತ್ಮಕವಾಗಿ ಪ್ರಭಾವಿತರಾದವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಪ್ರಯತ್ನದಿಂದ ಯಾವುದೇ ಕೆಲಸವನ್ನು ಯಶಸ್ಸುಗೊಳಿಸುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.