ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೊಸೆಗೆ ಗೆಲುವು

Public TV
1 Min Read
Davanagere

ದಾವಣಗೆರೆ: ಕಾಂಗ್ರೆಸ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್‌ (Prabha Mallikarjun) ಅವರು ದಾವಣಗೆರೆ ಕ್ಷೇತ್ರದಿಂದ 26,094 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಂಸದ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ (Gayathri Siddeshwara) ವಿರುದ್ಧ ಜಯಗಳಿಸಿದ್ದಾರೆ. ಕ್ಷೇತ್ರದಲ್ಲಿ ಜನ ಕಾಂಗ್ರೆಸ್‌ಗೆ (Congress) 6,33,059 ಹಾಗೂ ಬಿಜೆಪಿಗೆ 6,06,965 ಮತ ನೀಡಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

Davangere GM Siddeshwar BJP General Elections 2024 Gayatri Siddeshwar

2019ರಲ್ಲಿ ಬಿಜೆಪಿಯ (BJP) ಜಿ.ಎಂ.ಸಿದ್ದೇಶ್ವರ್‌ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಹೆಚ್‌.ಮಂಜಪ್ಪ ಅವರನ್ನು ಮಣಿಸಿದ್ದರು. ಬರೋಬ್ಬರಿ 1,69,707 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಈ ಬಾರಿ ಸಿದ್ದೇಶ್ವರ್‌ ಟಿಕೆಟ್‌ ನೀಡಲು ಬಿಜೆಪಿ ಹಿಂದೇಟು ಹಾಕಿತ್ತು. ಪಟ್ಟು ಬಿಡದ ಸಿದ್ದೇಶ್ವರ್‌ ತಮ್ಮ ಪತ್ನಿಗೆ ಟಿಕೆಟ್‌ ಗಿಟ್ಟಿಸಿದರು. ಇತ್ತ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ತಮ್ಮ ಸೊಸೆಗೆ ಪಕ್ಷದಿಂದ ಟಿಕೆಟ್‌ ಕೊಡಿಸಿದ್ದರು. ಇದನ್ನೂ ಓದಿ: ಹಾವೇರಿಯಲ್ಲಿ ಬೊಮ್ಮಾಯಿಗೆ ಗೆಲುವು

ಕ್ಷೇತ್ರವು ಇಬ್ಬರು ಮಹಿಳೆಯರ ಹಣಾಹಣಿಯಿಂದ ಕುತೂಹಲ ಮೂಡಿಸಿತ್ತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾ ಅವರು ಗೆದ್ದು ಬೀಗಿದ್ದಾರೆ.

Share This Article