ಕಿಚ್ಚನ ಜೊತೆ ನಟಿಸಬೇಕಂತೆ ಮಹಾನಟಿ: ಅವಕಾಶ ಕೊಡ್ತಾರಾ ಸುದೀಪ್?

Public TV
1 Min Read
sudeep

ಷ್ಟೋ ಅಭಿಮಾನಿಗಳ ಹೃದಯ ಸಿಂಹಾಸನಾಧೀಶ ಕಿಚ್ಚ ಸುದೀಪ (Kiccha Sudeep). ಅಭಿನಯ ಚಕ್ರವರ್ತಿಯ ಗತ್ತು-ಮಾತು ಇಡೀ ದೇಶಕ್ಕೇ ಗೊತ್ತು. ಹೀಗಿರುವಾಗ ಅಪ್ಪಟ ಕನ್ನಡದ ಮಣ್ಣಿನ ಹುಡುಗಿಗೆ ಅವರ ಮೇಲಿನ ಅಭಿಮಾನ ಎಂಥದ್ದಿರಬೇಡ. ನಟಿಯಾಗುವ ಕನಸು ಹೊತ್ತು ಮಹಾನಟಿ ವೇದಿಕೆ ಏರಿರುವ ಆಶಿಕಾ ಶರ್ಮಾಗೆ ಕಿಚ್ಚ ಅಂದ್ರೆ ಬರೀ ಅಭಿಮಾನ ಹುಚ್ಚು ಅಭಿಮಾನ. ಇದೀಗ ಮಹಾನಟಿ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಡಬ್ಬಿಂಗ್ ಆರ್ಟಿಸ್ಟ್ ಆಶಿಕಾ ಶರ್ಮಾಗೆ (Aashika Sharma) ಕಿಚ್ಚನಿಂದ ಶುಭಾಶಯವೂ ಅದೇ ವೇದಿಕೆಯಲ್ಲಿ  ಸರ್ ಪ್ರೈಸ್ ಆಗಿ ಸಿಕ್ಕಿದೆ.

Aashika Sharma

ಹೀರೋಯಿನ್ ಇಂಟ್ರುಡಕ್ಷನ್ ರೌಂಡ್‌ನಲ್ಲಿ ಆಶಿಕಾ ಶರ್ಮಾ ಉತ್ತಮವಾಗಿ ನಟಿಸಿದ್ರು. ಬಳಿಕ ವೇದಿಕೆಯಲ್ಲೇ ಕಿಚ್ಚ ಆಶಿಕಾಗೆ ಆಡಿಯೋ ಮೂಲಕ ಶುಭಾಶಯ ತಿಳಿಸಿದ್ರು. ಅನಿರೀಕ್ಷಿತವಾಗಿ ಕಿಚ್ಚ ಧ್ವನಿ ಆಲಿಸಿದ ಆಶಿಕಾ ಖುಷಿಗೆ ಪಾರವೇ ಇರಲಿಲ್ಲ. ಬಳಿಕ ಕಿಚ್ಚನನ್ನ ಆಶಿಕಾ ಈ ಹಿಂದೆ ಭೇಟಿ ಮಾಡಿದ್ದ ಸಂಗತಿ ಹಾಗೂ ಎಷ್ಟು ದೊಡ್ಡ ಅಭಿಮಾನಿ ಅನ್ನೋದನ್ನ ಹೇಳಿಕೊಂಡಿದ್ದಾರೆ. ಆಶಿಕಾ ಶರ್ಮಾ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು ವಿಕ್ರಾಂತ ರೋಣ (Vikrant Rona) ಚಿತ್ರದ ರಕ್ಕಮ್ಮ ಪಾತ್ರಕ್ಕೆ ಅಂದ್ರೆ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಧ್ವನಿ ಕೊಟ್ಟಿದ್ರು.

`ಊರಲ್ಲಿ ಇವತ್ತು ಇವರೊಬ್ಬರದ್ದೇ ಹೆಸರು ಚಾಲ್ತಿಯಲ್ಲಿರೋದು’ ವಿಕ್ರಾಂತ ರೋಣ’ ಟ್ರೈಲರ್ ನಲ್ಲಿ ಇಣುಕಿದ್ದ ಈ ಡೈಲಾಗ್ ಚಿತ್ರ ರಿಲೀಸ್‌ಗೂ ಮುನ್ನವೇ ಭಾರೀ ವೈರಲ್ ಆಗಿತ್ತು. ಈ ಮ್ಯಾಜಿಕಲ್ ಧ್ವನಿಯ ಹಿಂದಿನ ಶಕ್ತಿಯೇ ಆಶಿಕಾ ಶರ್ಮಾ, ಬಳಿಕ ಸುದೀಪ್‌ರನ್ನ ಹಿಂದೊಮ್ಮೆ ಆಶಿಕಾ ಭೇಟಿಯಾಗಿದ್ದರಂತೆ. ಅದಾಗಿ ಎಷ್ಟೋ ವರ್ಷಗಳಾದ್ಮೇಲೆ ಆಶಿಕಾಗೆ ಇದೀಗ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸುದೀಪ್ ಆಕಸ್ಮಿಕ ಸಂದೇಶಕ್ಕೆ ಥ್ರಿಲ್ ಆದ ಆಶಿಕಾ ವೇದಿಕೆಯಲ್ಲೇ ಅವರ ಜೊತೆ ನಟಿಸುವ ಅವಕಾಶವನ್ನ ಕೇಳಿದ್ದಾರೆ. ಆಶಿಕಾ ಮನವಿಗೆ ಕಿಚ್ಚ ಸುದೀಪ್ ಸ್ಪಂಧಿಸುತ್ತಾರಾ..? ತಮ್ಮ ಚಿತ್ರದಲ್ಲಿ ನಟಿಸೋಕೆ ಅವಕಾಶ ಕೊಡ್ತಾರಾ ? ಸಮಯ ಬಂದಾಗ ಗೊತ್ತಾಗುತ್ತೆ.

Share This Article