‘ಕಾಂತಾರ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದ ನಟ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ನಟನೆ, ಆ ಸಿನಿಮಾವನ್ನ ಪ್ರೆಸೆಂಟ್ ಮಾಡಿದ ರೀತಿಗೆ ಇಡೀ ಭಾರತೀಯ ಚಿತ್ರರಂಗವೇ ಎದ್ದು ನಿಂತು ಚಪ್ಪಾಳೆ ತಟ್ಟಿತ್ತು. ಇದೀಗ ‘ಕಾಂತಾರ ಚಾಪ್ಟರ್-1’ (Kantara Chapter 1) ಸಿನಿಮಾದ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದಕ್ಕೆ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ರಿಷಬ್ ಶೆಟ್ಟಿಗೆ (Rishab Shetty) ಹರಿಪ್ರಿಯಾ ಇಟ್ಟಿರುವ ನಿಕ್‌ನೇಮ್ ಬಗ್ಗೆ ರಿವೀಲ್ ಮಾಡಿದ್ದಾರೆ.
- Advertisement -
ಈ ಸಮಯದಲ್ಲಿ ನಟಿ ಹರಿಪ್ರಿಯಾ (Haripriya) ಅವರು ರಿಷಬ್ ಶೆಟ್ಟಿ ಅವರ ಜೊತೆಗಿನ ಶೂಟಿಂಗ್ ದಿನಗಳನ್ನ ಮೆಲುಕು ಹಾಕಿದ್ದಾರೆ. ‘ರಿಷಬ್ ಅವರನ್ನ ಆತ್ಮೀಯವಾಗಿ ನಾನು ಗುರೂ ಅಂತಾನೇ ಕರಿತಿದ್ದೆ ಎಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಜೊತೆಗೆ ರಿಷಬ್ ಅವರಿಗೆ ತುಂಬಾ ಇಷ್ಟವಾದ ಚಾಕ್‌ಲೇಟ್ ಅನ್ನು ಗಿಫ್ಟ್ ಆಗಿ ನೀಡಿದರು. ಅಷ್ಟು ದೊಡ್ಡ ನಟರಾಗಿದ್ದ ರಿಷಬ್ ಶೆಟ್ಟಿ ಕೂಡ ಚಾಕ್‌ಲೇಟ್ ಅನ್ನು ಪ್ರೀತಿಯಿಂದಲೇ ಸ್ವೀಕರಿಸಿದರು. ಇದನ್ನೂ ಓದಿ:ಕಾರು ಅಪಘಾತ: ರವೀನಾ ಟಂಡನ್ ಮೇಲೆ ಸುಳ್ಳು ಕೇಸ್- ಡಿಸಿಪಿ ಸ್ಪಷ್ಟನೆ
- Advertisement -
- Advertisement -
‘ರಿಕ್ಕಿ’ ಸಿನಿಮಾ ಸೆಟ್‌ನಲ್ಲಿ ಹರಿಪ್ರಿಯಾ ಚಾಕ್‌ಲೇಟ್ ಅನ್ನು ಎಲ್ಲರಿಗೂ ತಂದು ಕೊಡುತ್ತಿದ್ದರಂತೆ. ಇಡೀ ಸೆಟ್‌ಗೆ ಇದು ಫೇವರೇಟ್ ಆಗಿತ್ತು. ಅನ್ನೋ ಮಾತನ್ನ ನಟ ರಿಷಬ್ ಶೆಟ್ಟಿ ಕೂಡ ಈ ವೇಳೆ ಹಂಚಿಕೊಂಡರು. ಜೊತೆಗೆ ಸಿನಿಮಾ ರಂಗಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿ ಹರಿಪ್ರಿಯಾ ಅಂತ ಆಹ್ವಾನ ನೀಡಿದರು ಡಿವೈನ್‌ಸ್ಟಾರ್.
- Advertisement -
ರಿಷಬ್ ಶೆಟ್ಟಿ ಮೊದಲ ನಿರ್ದೇಶನದ ಸಿನಿಮಾ ‘ರಿಕ್ಕಿ’ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಂ’ (Bell Bottom) ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ತೆರೆಹಂಚಿಕೊಂಡಿದ್ದರು ಹರಿಪ್ರಿಯಾ. ಸದ್ಯ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಹರಿಪ್ರಿಯಾ ಸಿನಿಮಾ ರಂಗಕ್ಕೆ ಸದ್ಯದಲ್ಲಿಯೇ ಕಮ್ ಬ್ಯಾಕ್ ಮಾಡಲಿದ್ದಾರೆ.