ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

Public TV
1 Min Read
PEMA KHANDU

ಇಟಾನಗರ: ಅರುಣಾಚಲ ಪ್ರದೇಶಕ್ಕೆ, ಅದರಲ್ಲೂ ಬಿಜೆಪಿಗೆ (BJP) ಇಂದು ಐತಿಹಾಸಿಕ ದಿನ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ ಎಂದು ಸಿಎಂ ಪೆಮಾ (Pema Khandu) ಖಂಡು ಹೇಳಿದ್ದಾರೆ.

ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ.  2019 ರಲ್ಲಿ ನಾವು 41 ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ನಾವು 46 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದೇವೆ ಎಂದು ತಿಳಿಸಿದರು.

ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಈ ವೇಳೆ ಗೆಲ್ಲುವ ಎಲ್ಲಾ ಅಭ್ಯರ್ಥಿಗಳು ಇಟಾನಗರಕ್ಕೆ ಆಗಮಿಸುತ್ತಾರೆ. ದೆಹಲಿಯ ಹಿರಿಯ ನಾಯಕರು ಕೂಡ ಬರಬಹುದು. ಪಕ್ಷದ ಔಪಚಾರಿಕತೆಯ ನಂತರ ನಾವು ಹೊಸ ಸರ್ಕಾರ ರಚಿಸಲು ನಮ್ಮ ಹಕ್ಕು ಮಂಡಿಸುತ್ತೇವೆ ಎಂದರು.

ಒಟ್ಟಿನಲ್ಲಿ ರಾಜ್ಯದ ಎರಡೂ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಮಗೆ ಖಚಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಇಟಿ ಫಲಿತಾಂಶ ದಿಢೀರ್‌ ಪ್ರಕಟ: ಸ್ಪಷ್ಟನೆ ನೀಡಿದ ಕೆಇಎ

ಬಿಜೆಪಿಯು ಅರುಣಾಚಲ ಪ್ರದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, 60 ಸದಸ್ಯರ ವಿಧಾನಸಭೆಯಲ್ಲಿ 46 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಬಹುಮತವನ್ನು ಪಡೆದುಕೊಂಡಿತು. ಏಪ್ರಿಲ್ 19 ರಂದು ಈಶಾನ್ಯ ರಾಜ್ಯದಲ್ಲಿ ಚುನಾವಣೆ ನಡೆದ 50 ಸ್ಥಾನಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಉಳಿದ 10 ಸ್ಥಾನಗಳನ್ನು ಬಿಜೆಪಿಯು  ಅವಿರೋಧವಾಗಿ ಗೆದ್ದಿದೆ. 50 ಸ್ಥಾನಗಳ ಪೈಕಿ ಬಿಜೆಪಿ 36 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.

Share This Article