Exit Poll 2024 | ದ್ರಾವಿಡರ ನಾಡಿನಲ್ಲಿ ಕಮಲೋತ್ಪತ್ತಿ – ಬಿಜೆಪಿಯಿಂದ ಐತಿಹಾಸಿಕ ಸಾಧನೆ!

Public TV
1 Min Read
AnnaMali

ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ರಾಜ್ಯ ತಮಿಳುನಾಡಿನಲ್ಲೂ (Tamil Nadu) ಈ ಬಾರಿ ಬಿಜೆಪಿ ಖಾತೆ ತೆರೆಯುವ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು (Exit Poll 2024) ಭವಿಷ್ಯ ನುಡಿದಿವೆ.

2019ರ ಚುನಾವಣೆಯಲ್ಲಿ 39 ಸ್ಥಾನಗಳ ಪೈಕಿ ಡಿಎಂಕೆ 38 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್​ಡಿಎ ಕೂಟ ತೀವ್ರ ಪ್ರತಿರೋಧ ಎದುರಿಸಿತ್ತು. ಆದ್ರೆ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ ಎಂಬ ಅಂಕಿ ಅಂಶಗಳನ್ನು ಚುನಾವಣೋತ್ತರ ಸಮೀಕ್ಷೆಗಳು ತೆರೆದಿಟ್ಟಿವೆ.

ಯಾವ ಸಮೀಕ್ಷೆ ಹೇಗಿದೆ?
ಇಂಡಿಯಾ ಟಿವಿ: ಬಿಜೆಪಿ: 5-7, ಡಿಎಂಕೆ: 16-18, ಕಾಂಗ್ರೆಸ್‌: 6-8, ಎಐಡಿಎಂಕೆ: 0-1, ಇತರೆ: 8-1
ಇಂಡಿಯಾ ಟುಡೆ: ಬಿಜೆಪಿ: 1-3, ಐಎನ್‌ಡಿಐಎ: 26-30, ಎಐಡಿಎಂಕೆ 0-2, ಇತರೆ: 00
ಸಿ – ವೋಟರ್‌: ಬಿಜೆಪಿ – 1, ಐಎನ್‌ಡಿಐಎ: 37-39, ಇತರೆ: 00
ಆಕ್ಸಿಸ್‌ ಮೈ ಇಂಡಿಯಾ: ಬಿಜೆಪಿ – 1, ಐಎನ್‌ಡಿಐಎ: 33-37, ಇತರೆ: 00
ಟುಡೇಸ್‌ ಚಾಣಕ್ಯ: ಬಿಜೆಪಿ-10 ಎಐಡಿಎಂಕೆ: 0-2, ಡಿಎಂಕೆ: 29, ಇತರೆ: 00

ತಮಿಳುನಾಡಿನಲ್ಲಿ ಈ ಬಾರಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಘಟಕ ವ್ಯಾಪಕ ಪ್ರಚಾರ ಕೈಗೊಂಡಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೂ 7 ಬಾರಿ ಭೇಟಿ ನೀಡಿದ್ದರು. ಅಲ್ಲದೇ ಸೆಂಗೋಲ್‌ ರಾಜದಂಡ, ಕಚ್ಚತೀವು ವಿಚಾರಗಳನ್ನ ಪದೇ ಪದೇ ಒತ್ತಿ ಹೇಳಿದ್ದರು. ಲೋಕಸಭಾ ಚುನಾವಣೆಯ ಪ್ರಚಾರ ಆರಂಭಿಸಿದ್ದ ಅದೇ ಕನ್ಯಾಕುಮಾರಿಯ ವಿವೇಕಾನಂದ ಮೆಮೊರಿಯಲ್‌ ಹಾಲ್‌ನಲ್ಲಿ ಎರಡು ಧ್ಯಾನ ಮಾಡುವ ಮೂಲಕ ಮೋದಿ ಪ್ರಚಾರ ಅಂತ್ಯಗೊಳಿಸಿದ್ದರು.

ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿವೆ. ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ. ಇದರಲ್ಲಿ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರ ಪಾತ್ರ ದೊಡ್ಡದಿದೆ.

Share This Article