ದೇಶದಲ್ಲಿ ಮೋದಿ ಅಲೆ ಇದೆ :ಮತದಾನದ ಬಳಿಕ ಕಂಗನಾ ಪ್ರತಿಕ್ರಿಯೆ

Public TV
1 Min Read
kangana

ಲೋಕಸಭೆ ಚುನಾವಣೆ (Loksabha Election 2024) ಜೂನ್ 1ರಂದು ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಲೋಕಸಭಾ ಚುನಾವಣೆ ಅಂತಿಮ ಹಂತದಲ್ಲಿದೆ. ಸದ್ಯ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) ಮತದಾನ ಮಾಡಿದ್ದಾರೆ. ಸರದಿ ಸಾಲಿನಲ್ಲಿ ನಿಂತು ನಟಿ ವೋಟ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ದಿನವೇ ರಿಲೀಸ್ ಆಗಲಿದೆ ಕೀರ್ತಿ ಸುರೇಶ್ ನಟನೆಯ ಸಿನಿಮಾ

Kangana Ranaut

ಜನಸಾಮಾನ್ಯರ ಜೊತೆ ಸಾಲಿನಲ್ಲಿ ನಿಂತು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಕಂಗನಾ ವೋಟ್ ಮಾಡಿದ್ದಾರೆ. ಮತದಾನದ ಬಳಿಕ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇದೀಗ ನನ್ನ ಮತವನ್ನು ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಮತದಾನದ ಹಕ್ಕನ್ನು (Vote) ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಬಿಟೌನ್ ಟಾಕ್: ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

kangana ranaut dhaakad 1

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅಲೆ ಇದೆ. ಹಿಮಾಚಲ ಪ್ರದೇಶ, ಮಂಡಿ ಜನರು ನನ್ನನ್ನು ಹಾರೈಸುತ್ತಾರೆ ಎಂಬ ನಂಬಿಕೆಯಿದೆ. ರಾಜ್ಯದ ಎಲ್ಲಾ 4 ಸ್ಥಾನಗಳನ್ನು ನಾವು ಪಡೆಯುತ್ತೇವೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.

ಅಂದಹಾಗೆ, ಮಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ ನಟಿ ಕಂಗನಾ.

Share This Article