– ಮೊದಲ ದಿನ ಶಾಲೆಗೆ ಹೋಗದೇ ಚಕ್ಕರ್ ಹಾಕಿದ್ದ ಮಕ್ಕಳು
– ಅಪಾಯದಿಂದ ಪಾರಾದ ಅಜ್ಜಿ
ಬಾಗಲಕೋಟೆ: ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ (Sister), ತಮ್ಮ (Brother) ಸಾವನ್ನಪ್ಪಿದ ಘಟನೆ ಇಳಕಲ್ (Ilkal) ತಾಲೂಕಿನ ಕಂದಗಲ್‌ನಲ್ಲಿ ನಡೆದಿದೆ.
ಗೀತಾ ಈಶ್ವರಯ್ಯ ಆದಾಪುರಮಠ(14) ಹಾಗೂ ಆಕೆಯ ಸಹೋದರ ರುದ್ರಯ್ಯ(10) ಮೃತಪಟ್ಟರೆ ಮನೆಯಲ್ಲಿದ್ದ ಅಜ್ಜಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ
ಬೆಳಗ್ಗೆ ತಂದೆ, ತಾಯಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಗೀತಾ, ರುದ್ರಯ್ಯ ಮತ್ತು ಅಜ್ಜಿ ಇದ್ದರು. ಮೇಲ್ಛಾವಣಿ ಬೀಳುವ ಕೆಲವೇ ಕ್ಷಣದ ಮೊದಲು ಅಜ್ಜಿ ಮನೆಯಿಂದ ಹೊರಗಡೆ ಬಂದಿದ್ದರು.
ಮನೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಗೀತಾ ಮತ್ತು ರುದ್ರಯ್ಯ ಅವರ ಮೇಲೆ ಅಪಾರ ಮಣ್ಣು, ಕಟ್ಟಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿ ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಇಳಕಲ್ ತಾಲೂಕು ಆಸ್ಪತ್ರೆಗೆ ಮಕ್ಕಳ ಶವವನ್ನು ರವಾನೆ ಮಾಡಲಾಗಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್ ಚಿನ್ನ!
ತಂದೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರೆ, ತಾಯಿ ಹೊಲಕ್ಕೆ ಹೋಗಿದ್ದರು. ಈ ವೇಳೆ ಇಂದು ಶಾಲೆಗೆ (School) ಹೋಗಿ ಎಂದು ಪೋಷಕರು ಮಕ್ಕಳಿಗೆ ಸೂಚಿಸಿದ್ದರು. ಪೋಷಕರ ಮಾತನ್ನು ನಿರ್ಲಕ್ಷಿಸಿದ ಮಕ್ಕಳು ಇಂದು ಮೊದಲ ದಿನ ಅಂತ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದರು. ಆಸ್ಪತ್ರೆ ಆವರಣದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.