ಹಗ್ಗಜಗ್ಗಾಟದಲ್ಲಿ ಚೀನಿಯರನ್ನು ಸೋಲಿಸಿದ ಭಾರತೀಯ ಸೈನಿಕರು

Public TV
1 Min Read
Indian Army Beats Chinese Troops In Tug Of War In Sudan

ನವದೆಹಲಿ: ನಮ್ಮ ಹೆಮ್ಮೆಯ ಸೈನಿಕರು (Indian) ಮತ್ತೊಮ್ಮೆ ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ. ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ (China Soldiers) ನಡುವೆ ನಡೆದ ಹಗ್ಗಜಗ್ಗಾಟದಲ್ಲಿ (Tough of War) ನಮ್ಮವರೇ ಗೆದ್ದು ಬೀಗಿದ್ದಾರೆ.

ಸುಡಾನ್‌ನಲ್ಲಿ (Sudan) ನಡೆದ ಹಗ್ಗಜಗ್ಗಾಟದಲ್ಲಿ ಭಾರತದ ಸೈನಿಕರು ಪಟ್ಟು ಬಿಡದೇ ಚೀನಾ ವಿರುದ್ಧ ವಿಜಯಶಾಲಿಗಳಾಗಿದ್ದು, ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ 49 ಸೆಕೆಂಡಿನ ವಿಡಿಯೋ  ಈಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ವರ್ತೆ ಪಂಜುರ್ಲಿ ಅಭಯ ನಿಜವಾಯ್ತು- ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು!


ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿರುವ (United Nations Peacekeeping Mission) ಭಾರತೀಯ ಸೈನಿಕರು ಸೂಡಾನ್‌ನಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ.

Share This Article