ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ- 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್

Public TV
1 Min Read
Belluru Attack On Hindu Abhilash

ಮಂಡ್ಯ: ಬೆಳ್ಳೂರು (Belluru) ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಸೋಮವಾರ ರಾತ್ರಿ ಬೆಳ್ಳೂರಿನ ಅಭಿಲಾಷ್ ಎಂಬಾತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಚೇರ್, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಅಭಿಲಾಷ್ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಹಲ್ಲೆ ನಡೆಸಿದವರ ಮೇಲೆ ಅಭಿಲಾಷ್ ತಂದೆ ರಾಮು ದೂರು ನೀಡಿದ್ದಾರೆ. ಇದನ್ನೂ ಓದಿ: ರಬ್ಬರ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕಾರ್ಮಿಕರು ಸುಟ್ಟು ಭಸ್ಮ

Mob attack Hindus house In Belluru town Nagamangala 2

ದೂರಿನನ್ವಯ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ನವೀದ್, ಸೂಫೀಯಾನ್, ಇಮ್ರಾನ್, ಸಮೀರ್, ಮುದಾಸೀರ್ ಸೇರಿ 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 307 (ಕೊಲೆ ಮಾಡುವ ಪ್ರಯತ್ನ), 504 (ಶಾಂತಿ ಭಂಗ ಮಾಡಲು ಉದ್ರೇಕಿಸುವುದಕ್ಕಾಗಿ ಉದ್ದೇಶಪೂರ್ವಕ ಅವಮಾನ), 506 (ಅಪರಾಧಿಕ ಭಯೋತ್ಪಾದನೆಗೆ ದಂಡನೆ) ಅಡಿ ಪ್ರಕರಣ ದಾಖಲಿಸಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

ಏನಿದು ಪ್ರಕರಣ?
ಬೈಕ್ ಟಚ್ ಮಾಡಿಕೊಂಡು ಓವರ್‌ಟೇಕ್ ಮಾಡಿದ್ದ ಇಬ್ಬರು ಮುಸ್ಲಿಂ ಯುವಕರನ್ನು ಶನಿವಾರ ಅಭಿಲಾಷ್ ಪ್ರಶ್ನೆ ಮಾಡಿದ್ದರು. ಅದೇ ದ್ವೇಷ ಮುಂದಿಟ್ಟುಕೊಂಡು ಸೋಮವಾರ ರಾತ್ರಿ ಹತ್ತಾರು ಜನರ ತಂಡ ಕಟ್ಟಿಕೊಂಡು ಬಂದು ಅಭಿಲಾಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ವಿಡಿಯೋ ಮಾಡಿಕೊಳ್ಳಲು ಕಾಂಗ್ರೆಸ್‌ನವರು ಹೇಳಿದ್ರಾ : ತಂಗಡಗಿ ಪ್ರಶ್ನೆ

ಅಷ್ಟೇ ಅಲ್ಲದೇ ಕೆಲ ಹಿಂದೂಗಳ ಮನೆಗಳಿಗೆ ನುಗ್ಗಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

Share This Article