ಫೇಕ್ ಖಾತೆಗಳ ಮೂಲಕ ಹೆಣ್ಣು ಮಕ್ಕಳ ಮತ್ತು ಸೆಲೆಬ್ರಿಟಿಗಳ ಮಾನ ಹರಾಜು ಮಾಡಿದವರ ವಿರುದ್ಧ ‘ಬಿಗ್ ಬಾಸ್’ (Bigg Boss Kannada 3) ಖ್ಯಾತಿಯ ಸುಷ್ಮಾ ವೀರ್ ದೂರು ದಾಖಲಿಸಿದ್ದಾರೆ. ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಕ್ಕೆ ಸೈಬರ್ ಠಾಣೆಗೆ ಮತ್ತು ಮಹಿಳಾ ಆಯೋಗಕ್ಕೆ ಬಿ. ಜಯಶ್ರೀ ಪುತ್ರಿ ಸುಷ್ಮಾ ವೀರ್ (Sushma Veer) ದೂರು ನೀಡಿದ್ದಾರೆ. ಇದನ್ನೂ ಓದಿ:ಎಂಟು ನಟಿಯರ ಜೊತೆ ಕಾಣಿಸಿಕೊಂಡ ನಟ ಗಣೇಶ್: ಕೃಷ್ಣಂ ಪ್ರಣಯ ಸಖಿ ಗೀತ
ಇತ್ತೀಚೆಗೆ ಯೂಟ್ಯೂಬ್‌ವೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಾರೆ. ಅವರವರ ಪೇಜ್‌ಗಳ ಲೈಕ್ ಲಾಭಕ್ಕಾಗಿ ಮಾನಹಾನಿ ಮಾಡಿದ್ದಾರೆ ಎಂದು ಸೈಬರ್ ಠಾಣೆ ಮತ್ತು ಮಹಿಳಾ ಆಯೋಗ ಎರಡೂ ಕಡೆ ನಟಿ ದೂರು ದಾಖಲಿಸಿದ್ದಾರೆ. ಟ್ರೋಲಿಗರ ವಿರುದ್ಧ ಕಾನೂನು ಸಮರಕ್ಕೆ ನಟಿ ಮುಂದಾಗಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಸೀಸನ್ 3ರಲ್ಲಿ ಸುಷ್ಮಾ ವೀರ್ ಸ್ಪರ್ಧಿಯಾಗಿದ್ದರು. ಸೀರಿಯಲ್ ಮತ್ತು ಕೆಲ ಸಿನಿಮಾಗಳಲ್ಲಿಯೂ ನಟಿ ಗುರುತಿಸಿಕೊಂಡಿದ್ದಾರೆ.