ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

Public TV
1 Min Read
Stones Pelted On Channagiri Police Station 11 detained 1

ದಾವಣಗೆರೆ: ಚನ್ನಗಿರಿ ಗಲಭೆ ಪ್ರಕರಣದ (Channagiri violence) ಸಿಐಡಿ ತನಿಖೆ ಚುರುಕಾಗಿದ್ದು ಡಿಜೆ ಹಳ್ಳಿ, ಕೆ.ಜಿ.ಹಳ್ಳಿ ಮಾದರಿ ಗಲಭೆಗೆ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಮೂರು ಎಫ್‌ಐಆರ್ (FIR) ಹಾಕಿದ್ದಾರೆ. ಇದರೊಂದಿಗೆ ಎಫ್‌ಐಆರ್‌ಗಳ ಸಂಖ್ಯೆ ಏರಕ್ಕೇರಿದೆ.

ಬಂಧಿತ 25 ಕಿಡಿಗೇಡಿಗಳ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ. ಸದ್ಯ 30ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

ಹಲ್ಲೆಗೊಳಗಾದ ಪೊಲೀಸರನ್ನು, ಗಲಭೆಗೆ ಸಾಕ್ಷಿಯಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಸಿಐಡಿ ವಿಚಾರಣೆಗೆ ಒಳಪಡಿಸಿದೆ. ಠಾಣೆಯ ಸಿಸಿಟಿವಿಯನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ಎಸ್‌ಐ ಅಖ್ತರ್‌ ಅವರನ್ನು ಸರ್ಕಾರ ಅಮಾನತು (Suspend) ಮಾಡಿದೆ. ಮೊನ್ನೆಯಷ್ಟೇ ಡಿವೈಎಸ್‌ಪಿ ಪ್ರಶಾಂತ್, ಸಿಪಿಐ ನಿರಂಜನ್‌ರನ್ನು ಸರ್ಕಾರ ಸಸ್ಪೆಂಡ್ ಮಾಡಿತ್ತು. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಚನ್ನಗಿರಿ ಗಲಭೆ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಿಡಿಗೇಡಿಗಳು ಮಾಡಿದ ಕೃತಕ್ಕೆ ಅಧಿಕಾರಿಗಳನ್ನು ತಲೆದಂಡ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಟೀಕರಣದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

 

Share This Article