ಇಂದು ಜವಾಹರಲಾಲ್ ನೆಹರು 60ನೇ ಪುಣ್ಯತಿಥಿ- ಪ್ರಧಾನಿ ಮೋದಿ ಗೌರವ ನಮನ

Public TV
2 Min Read
NARENDRA MODI NEHRU

– ಸೋನಿಯಾ, ಖರ್ಗೆ ಸೇರಿದಂತೆ ಗಣ್ಯರಿಂದ ಪುಷ್ಪ ನಮನ

ನವದೆಹಲಿ: ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು 60 ನೇ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೌರವ ನಮನ ಅರ್ಪಿಸಿದರೆ, ಇತ್ತ ಸೋನಿ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರು ಪುಷ್ಪ ನಮನ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತಮ್ಮ ಎಕ್ಸ್‌ ಖಾತೆಯಲ್ಲಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ನೆಹರೂ ಅವರ ಪುಣ್ಯತಿಥಿಯಂದು ಕಾಂಗ್ರೆಸ್ ನಾಯಕರು ಪುಷ್ಪ ನಮನ ಸಲ್ಲಿಸಿದರು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಹಲವು ಗಣ್ಯರು ರಾಷ್ಟ್ರ ರಾಜಧಾನಿಯಲ್ಲಿನ ಅವರ ಸ್ಮಾರಕ ಶಾಂತಿವನಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಖರ್ಗೆ ತಮ್ಮ ಎಕ್ಸ್‌ ನಲ್ಲಿ, ವೈಜ್ಞಾನಿಕ, ಆರ್ಥಿಕ, ಕೈಗಾರಿಕಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಮುಂದಕ್ಕೆ ಕೊಂಡೊಯ್ದ ಆಧುನಿಕ ಭಾರತದ ವಾಸ್ತುಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರು ಅವರ ಅತ್ಯುತ್ತಮ ಕೊಡುಗೆಯಿಲ್ಲದೆ ಭಾರತದ ಇತಿಹಾಸವು ಅಪೂರ್ಣವಾಗಿದೆ. ಅವರ ಪುಣ್ಯತಿಥಿಯಂದು “ಹಿಂದ್ ಕೆ ಜವಾಹರ್” ಅವರಿಗೆ ನಮ್ಮ ನಮ್ರ ನಮನಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದ ರಕ್ಷಣೆ, ದೇಶದ ಪ್ರಗತಿ, ದೇಶದ ಏಕತೆ ನಮ್ಮೆಲ್ಲರ ರಾಷ್ಟ್ರೀಯ ಧರ್ಮ. ನಾವು ವಿವಿಧ ಧರ್ಮಗಳನ್ನು ಅನುಸರಿಸಬಹುದು, ವಿವಿಧ ರಾಜ್ಯಗಳಲ್ಲಿ ವಾಸಿಸಬಹುದು, ವಿವಿಧ ಭಾಷೆಗಳನ್ನು ಮಾತನಾಡಬಹುದು. ಆದರೆ ಅದು ನಮ್ಮ ನಡುವೆ ಯಾವುದೇ ಗೋಡೆಯನ್ನು ಸೃಷ್ಟಿಸಬಾರದು. ಎಲ್ಲಾ ಜನರು ಪ್ರಗತಿಯಲ್ಲಿ ಸಮಾನ ಅವಕಾಶವನ್ನು ಪಡೆಯಬೇಕು. ನಮ್ಮ ದೇಶದಲ್ಲಿ ಕೆಲವರು ಶ್ರೀಮಂತರಾಗಿರಲು ಮತ್ತು ಹೆಚ್ಚಿನ ಜನರು ಬಡವರಾಗಲು ನಾವು ಬಯಸುವುದಿಲ್ಲ ಎಂದಿದ್ದರು. ಇಂದಿಗೂ ಕಾಂಗ್ರೆಸ್ ಪಕ್ಷವು ಅದೇ “ನ್ಯಾಯ” ಮಾರ್ಗವನ್ನು ಅನುಸರಿಸುತ್ತಿದೆ ಎಂದು ಖರ್ಗೆ ತಿಳಿಸಿದ್ದಾರೆ.

ಜವಾಹರಲಾಲ್ ನೆಹರು ಅವರು 1889ರ ನವೆಂಬರ್ 14 ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜನಿಸಿದರು. 1964 ರ ಮೇ 27 ರಂದು ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು. ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ಅನುಸರಿಸಿ 1947 ರ ಆಗಸ್ಟ್ 15 ರಂದು ಭಾರತದ ಮೊದಲ ಪ್ರಧಾನಿಯಾದರು. ಭಾರತದಲ್ಲಿ ಆರಂಭಲ್ಲಿ ನವೆಂಬರ್ 20 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಕಾರಣ ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ ಜವಾಹರಲಾಲ್‌ ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.

Share This Article