ಇನ್‍ಸ್ಟಾ ರೀಲ್ ಮಾಡಲು 100 ಅಡಿ ಎತ್ತರದಿಂದ ನೀರಿಗೆ ಹಾರಿ ಪ್ರಾಣ ಕಳೆದುಕೊಂಡ!

Public TV
1 Min Read
INSTA REEL

ರಾಂಚಿ: ಈಗೇನಿದ್ದರೂ ಸೋಶಿಯಲ್ ಮೀಡಿಯಾ ಜಮಾನ. ಜನ ತಮಗೆ ತೋಚಿದಂತೆ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಡುತ್ತಿದ್ದಾರೆ. ಅಂತೆಯೇ ಇನ್‍ಸ್ಟಾ ರೀಲ್ (Instagram Reel) ಮಾಡಲು ಹೋಗಿ ಹುಡುಗನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಾರ್ಖಂಡ್‍ನಲ್ಲಿ (Jharkhand) ನಡೆದಿದೆ.

ಜಾರ್ಖಂಡ್‍ನ ಸಾಹಿಬ್‍ಗಂಜ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಮೃತ ಯುವಕನನ್ನು ತೌಸಿಫ್ ಎಂದು ಗುರುತಿಸಲಾಗಿದೆ. ಈತ ಗೆಳೆಯನೊಬ್ಬನ ಜೊತೆ ವೀಡಿಯೋ ಮಾಡಲು ಹೇಳಿ 100 ಅಡಿ ಎತ್ತರದಿಂದ ನೀರಿನ ಕ್ವಾರಿಗೆ ಹಾರಿದ್ದಾನೆ. ಹೀಗೆ ಹಾರಿದವನು ಕೆಲ ಹೊತ್ತಿನ ಬಳಿಕ ನಾಪತ್ತೆಯಾಗಿದ್ದಾನೆ. ನಂತರ ತೌಸಿಫ್ ಗೆಳೆಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತೌಸಿಫ್‍ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ ಶವವಾಗಿ ಪತ್ತೆಯಾಗಿದ್ದಾನೆ. ಸದ್ಯ ತೌಸಿಫ್ ನೀರಿಗೆ ಜಿಗಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ರೀಲ್ಸ್ ಗಾಗಿ ಹುಚ್ಚಾಟ ಮೆರೆದಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಚಿವರಿಗೆ‌ ಡಿನ್ನರ್ ಏರ್ಪಾಡು ಮಾಡಿದ ಸಿಎಂ, ಡಿಸಿಎಂ: ಡಿ.ಕೆ.ಸುರೇಶ್ ನಿವಾಸದಲ್ಲಿ ಇಂದು ಊಟ

Share This Article