Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

‘ಚಿಲ್ಲಿ ಚಿಕನ್’ ಟೀಸರ್ ರಿಲೀಸ್ : ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ

Public TV
Last updated: May 22, 2024 10:00 am
Public TV
Share
3 Min Read
Chilli Chicken 1
SHARE

ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರು ನಿರ್ಮಾಣದ, ಪ್ರತೀಕ್ ಪ್ರಜೋಶ್ (Prateek Prajos) ಅವರ ನಿರ್ದೇಶನದ, ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಚಿಲ್ಲಿ ಚಿಕನ್ (Chilli Chicken). ಇತ್ತೀಚೆಗೆ ಈ ಚಿತ್ರದ ಟೀಸರ್ (Teaser) ಬಿಡುಗಡೆಯಾಯಿತು.  ಕೆಲಸಕ್ಕೆಂದು ಉತ್ತರ ಭಾರತದಿಂದ ಬಂದ ಐವರು ಹುಡುಗರು  ಬೆಂಗಳೂರಿನಲ್ಲಿ  ಚೈನೀಸ್ ರೆಸ್ಟೋರೆಂಟ್ ವೊಂದರಲ್ಲಿ ಕೆಲಸ ಮಾಡುತ್ತ, ತಾವೇ ಸ್ವಂತ ಹೋಟೆಲ್  ತೆರೆಯಲು ಮುಂದಾಗುತ್ತಾರೆ. ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಗೆಲ್ಲುತ್ತಾರಾ, ಇಲ್ವಾ  ಎನ್ನುವುದೇ ಚಿಲ್ಲೀ ಚಿಕನ್ ಚಿತ್ರದ ಕಥಾಹಂದರ.

Chilli Chicken 2

ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ ಪ್ರೊಡಕ್ಷನ್  ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಅದರಂತೆ ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಸಿನಿಮಾ ಪ್ರಿಯರು ಒಂದಾಗಿರುವುದು ವಿಶೇಷ. ಚಿತ್ರದ ನಿರ್ದೇಶಕ ಕೇರಳದವರು, ನಿರ್ಮಾಪಕ ಗುಜರಾತಿನವರು. ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು.

Chilli Chicken 3

ಈ ಸಂದರ್ಭದಲ್ಲಿ ಮಾತನಾಡಿದ  ನಿರ್ಮಾಪಕ ದೀಪ್ ಭೀಮಾಜಿಹಾನಿ  ನಾನು ಈಗಾಗಲೇ ಹಿಂದಿಯಲ್ಲಿ ಒಂದಿಷ್ಟು ಶಾರ್ಟ್ ಫಿಲಂಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರವನ್ನು ಕನ್ನಡದಲ್ಲಿ ಮಾತ್ರ ಮಾಡಿದ್ದೇವೆ. ಜೂನ್ ವೇಳೆಗೆ ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎಂದರು.  ನಿರ್ದೇಶಕ ಪ್ರತೀಕ್ ಪ್ರಜೋಶ್ ಮಾತನಾಡಿ  ಹಿಂದಿಯ ಪದ್ಮಾವತ್ ಸೇರಿದಂತೆ ಮಲಯಾಳಂ, ಗುಜರಾತಿ ಭಾಷೆಯ ಹಲವು ಸಿನಿಮಾಗಳಿಗೆ ಕೆಲಸ ಮಾಡಿ, ಕೆಲ ಶಾರ್ಟ್ ಫಿಲಂ  ಡೈರೆಕ್ಷನ್ ಮಾಡಿದ್ದೇನೆ. ಚಿಲ್ಲಿ ಚಿಕನ್ ಮೂಲಕ ಮೊದಲಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ನಾನು ಮೂಲತಃ ಕೇರಳದವನು. ಇಲ್ಲಿಯ ಜನ ಹಾಗೂ ಪರಿಸರ ನನಗೆ ತುಂಬಾ ಇಷ್ಟ. ಬೆಂಗಳೂರನಲ್ಲೇ  ಶಿಕ್ಷಣ ಪಡೆದಿದ್ದೇನೆ. ಸಿನಿಮಾ ಬಗ್ಗೆ ಹೇಳುವುದಾದರೆ, ನಾಲ್ಕು ಜನ ಉತ್ತರ ಭಾರತೀಯರು ಸೇರಿ ಬೆಂಗಳೂರಿನಲ್ಲಿ ಚೈನೀಸ್ ರೆಸ್ಟೋರೆಂಟ್ ಪ್ರಾರಂಭಿಸಲು ಪ್ಲ್ಯಾನ್ ಮಾಡುತ್ತಾರೆ. ಅದು ಆಗುತ್ತಾ, ಇಲ್ವಾ ಅನ್ನೋದೆ ಸಿನಿಮಾ. ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ನಡೆದ  ನೈಜ ಘಟನೆ ಆಧಾರಿತ ಚಿತ್ರವಾಗಿದ್ದು,‌ ಬಹಳ ಇಂಟರೆಸ್ಟಿಂಗ್ ಆಗಿ ಕಥೆ ಸಾಗುತ್ತದೆ, ಬೆಂಗಳೂರು  ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಕೊರಿಯನ್ ಮಾದರಿಯ ಕನ್ನಡ ಡ್ರಾಮಾ ಸಿನಿಮಾ ಎನ್ನಬಹುದು’ ಎಂದು ಹೇಳಿದರು.

Chilli Chicken 4

ನಂತರ ನಟ ಶೃಂಗಾ ಮಾತನಾಡಿ ‘ಆದರ್ಶ ಎಂಬ ಹೊಟೇಲ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ಇಷ್ಟ ಆಯ್ತು. ತುಂಬಾ ಸೂಕ್ಷ್ಮವಾದ ವಿಚಾರಗಳನ್ನು ಹ್ಯೂಮರಸ್ ಆಗಿ ಹೇಳಲಾಗಿದೆ. ಬೇರೆ ರಾಜ್ಯದಿಂದ ಬಂದ ಹುಡುಗರು ಯಾವರೀತಿ ಇರ್ತಾರೆ,  ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ, ನಾವು ಬೇರೆಯವರನ್ನು ಹೇಗೆ ನೋಡುತ್ತೇವೆ ಮತ್ತು ಅವರು ನಮ್ಮೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದೆ ಎಂದರು. ನಟಿ ರಿನಿ ಮಾತನಾಡಿ ನಾನು ಚೆನ್ನೈ ಮೂಲದವಳು. ತಮಿಳು, ತೆಲಗು, ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಇದರಲ್ಲಿ‌ ಉತ್ತರ ಭಾರತದ  ಹುಡುಗಿ ಅನು ಪಾತ್ರ ಮಾಡಿದ್ದೇನೆ ಎಂದರು. ಮತ್ತೋರ್ವ ನಟಿ ನಿತ್ಯಶ್ರೀ ಮಾತನಾಡಿ  ವರ್ಷ ಹೆಸರಿನಲ್ಲಿ ನಾಯಕನ ಗರ್ಲ್‌ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು.

 

ಸಿದ್ದಾಂತ್ ಸುಂದರ್ ಅವರ ಸಂಗೀತ ಸಂಯೋಜನೆ, ಶ್ರೀಶ್ ತೋಮರ್ ಅವರ ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ, ತ್ರಿಲೋಕ್ & ಕೆಎಎಸ್ ಅವರ ಸಂಭಾಷಣೆ, ಸಿದ್ದಾಂತ್ ಸುಂದರ್, ಪ್ರತೀಕ್ ಪ್ರಜೋಶ್ ಮತ್ತು ಕೆಎಎಸ್ ಅವರ ಕಥೆ, ಕೆಎಎಸ್ ಮತ್ತು ಪ್ರತೀಕ್ ಪ್ರಜೋಶ್ ಅವರ ಚಿತ್ರಕಥೆ, ಮಾರ್ಟಿನ್ ಯೋ ಅವರ ಸಾಹಿತ್ಯ, ಮಾಸ್ಟರ್ ಎನ್ ಎ ಅವರ ಸಾಹಸ ಸಂಯೋಜನೆ‌ ಈ ಚಿತ್ರಕ್ಕಿದೆ. ಪ್ರಮುಖ ತಾರಾಗಣದಲ್ಲಿ ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‌ಥಿನ್ ಥೋಕ್‌ಚೋಮ್, ಹಿರಾಕ್ ಸೋನೊವಾಲ್ ಮುಂತಾದವರಿದ್ದಾರೆ.

TAGGED:Chilli ChickenPrateek PrajosShringateaserಚಿಲ್ಲಿ ಚಿಕನ್ಟೀಸರ್ಪ್ರತೀಕ್ ಪ್ರಜೋಶ್ಶೃಂಗಾ
Share This Article
Facebook Whatsapp Whatsapp Telegram

Cinema News

mammootty
ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್
Cinema Latest South cinema Top Stories
Prabhas Anuksha
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ
Cinema Latest South cinema Top Stories
Chahal Dhanashree
ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ
Cinema Cricket Latest Top Stories
amitabh bacchan house
ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ
Cinema Latest National Top Stories
Rukmini Vasanth Pot Making
ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್
Cinema Latest Sandalwood Top Stories

You Might Also Like

Rekha Gupta 2
Latest

ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

Public TV
By Public TV
11 minutes ago
Vijayapura
Districts

ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್

Public TV
By Public TV
16 minutes ago
c.n.manjunath nirmala sitharaman
Latest

ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

Public TV
By Public TV
27 minutes ago
Amit shah
Latest

ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

Public TV
By Public TV
31 minutes ago
Narendra Modi Putin
Latest

ಭಾರತಕ್ಕೆ 5% ರಿಯಾಯಿತಿಯಲ್ಲಿ ತೈಲ ಪೂರೈಕೆ: ರಷ್ಯಾ

Public TV
By Public TV
47 minutes ago
Agni 5 Missile
Latest

ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

Public TV
By Public TV
48 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?