‘ಪೌಡರ್’ ಹಚ್ಚಲು ರೆಡಿಯಾದ ಧನ್ಯಾ ರಾಮ್‌ಕುಮಾರ್- ಪೋಸ್ಟರ್ ಔಟ್

Public TV
1 Min Read
dhanya ramkumar

ಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಇದೀಗ ‘ಪೌಡರ್’ (Powder Film) ಹಚ್ಚಲು ರೆಡಿಯಾಗಿದ್ದಾರೆ. ದೂದಪೇಡ ದಿಗಂತ್ (Actor Diganth) ಜೊತೆ ನಕ್ಕು ನಗಿಸಲು ನಟಿ ರೆಡಿಯಾಗಿದ್ದಾರೆ. ಸದ್ಯ ಧನ್ಯಾ ಪಾತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

DHANYA RAMKUMAR

ವಿಭಿನ್ನ ಪಾತ್ರದ ಮೂಲಕ ಪಾತ್ರದ ಮೂಲಕ ಧನ್ಯಾ ಬರುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ತುಟಿ ಮೇಲಿರೋದನ್ನು ತುಟೀಲೇ ತಾನೇ ಹುಡುಕಬೇಕು? ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.‌ ಇದನ್ನೂ ಓದಿ:ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ

 

View this post on Instagram

 

A post shared by KRG Studios (@krg.studios)

ಅಂದಹಾಗೆ, ಇತ್ತೀಚೆಗೆ ಪೌಡರ್ ಸಿನಿಮಾದ ಟೀಸರ್ ಕೂಡ ರಿಲೀಸ್ ಮಾಡಲಾಗಿತ್ತು. ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಜುಲೈ 12 ಚಿತ್ರಮಂದಿರಗಳಲ್ಲಿ ಸಿಗಲಿದೆ. ಈಗಾಗಲೇ ತನ್ನ ಟೀಸರ್ ಮೂಲಕ ‘ಪೌಡರ್’ (Powder Film) ಎಲ್ಲೆಡೆ ನಗೆ ಚಟಾಕಿ ಹತ್ತಿಸಿದ್ದು, ಚಿತ್ರ ಬಿಡುಗಡೆಯ ನಂತರ ಈ ಹಾಸ್ಯ ನಗು ದುಪ್ಪಟ್ಟುಗೊಳ್ಳಲಿದೆ.

ಈ ಚಿತ್ರದಲ್ಲಿ ಧನ್ಯಾ ರಾಮ್ ಕುಮಾರ್ (Dhanya Ramkumar) ಜೊತೆ ದಿಗಂತ್, ರವಿಶಂಕರ್ ಗೌಡ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ನಾಗಭೂಷಣ್, ಅನಿರುದ್ಧ ಆಚಾರ್ಯ ಸೇರಿದಂತೆ ಹಲವರು ನಟಿಸಿದ್ದಾರೆ.’ಪೌಡರ್’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರವಾಗಿದೆ.

Share This Article