ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಮತ್ತು ವಿಜಯ್‌ಲಕ್ಷ್ಮಿ (Vijaylakshmi) ಅದ್ಧೂರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. 21ನೇ ಮದುವೆ ಆ್ಯನಿವರ್ಸರಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಮದುವೆಯಾಗಿ 20 ವರ್ಷಗಳು ಕಳೆದಿವೆ. ಇದೀಗ 21ನೇ ವರ್ಷದ ಮ್ಯಾರೇಜ್ ಆ್ಯನಿವರ್ಸರಿ (Wedding Anniversary) ಸಂಭ್ರಮದಲ್ಲಿದ್ದಾರೆ. ದುಬೈನಲ್ಲಿ (Dubai) ಕಲರ್‌ಫುಲ್ ಆಗಿ ಕಾರ್ಯಕ್ರಮ ಆಯೋಜಿಸಿ ಖುಷಿಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ಅಭಿಮಾನಿಗಳು ಕೂಡ ಭಾಗಿಯಾಗಿದ್ದಾರೆ.
View this post on Instagram
2003ನೇ ಇಸವಿಯಲ್ಲಿ ಮೇ 19ರಂದು ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಮದುವೆ ಜರುಗಿತು. ಇದೀಗ ಈ ದಂಪತಿಗೆ ವಿನೀಶ್ ಎಂಬ ಪುತ್ರನಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ರಿಲೀಸ್ ಡೇಟ್ ಫಿಕ್ಸ್
ಇದೀಗ ಕೈತುಂಬಾ ಸಿನಿಮಾ ಕಮೀಟ್‌ಮೆಂಟ್‌ಗಳ ನಡುವೆ ಪತ್ನಿ ಜೊತೆ ದರ್ಶನ್‌ಗೆ ದುಬೈಗೆ ಹಾರಿದ್ದು, ಇ ವರ್ಷ ಮದುವೆಯಾದ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಸದ್ಯ ದರ್ಶನ್ ‘ಡೆವಿಲ್’ (Devil Film) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಕರಾವಳಿ ಬೆಡಗಿ ರಚನಾ ರೈ (Rachana Rai) ಕಾಣಿಸಿಕೊಳ್ಳಲಿದ್ದಾರೆ.