ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ (Cannes Film Festival 2024) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಲವು ಚಿತ್ರರಂಗದ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕಾನ್ಸ್ ಚಿತ್ರೋತ್ಸವದಲ್ಲಿ ಸಾಧು ಕೋಕಿಲ (Sadhu Kokila) ಭಾಗಿಯಾಗಿದ್ದಾರೆ. ಈ ವೇಳೆ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ರನ್ನು (A.R. Rahman) ಭೇಟಿಯಾಗಿದ್ದಾರೆ. ಹಳೆಯ ದಿನಗಳನ್ನು ಸಾಧು ಕೋಕಿಲ ಸ್ಮರಿಸಿದ್ದಾರೆ.
View this post on Instagram
ನಟ ಕಮ್ ಗಾಯಕ ಸಾಧು ಕೋಕಿಲ ಅವರು ನಟನೆ ಮಾತ್ರವಲ್ಲ ಸಂಗೀತ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದ್ದಾರೆ. ಇದೀಗ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎ.ಆರ್ ರೆಹಮಾನ್‌ರನ್ನು ಅನಿರೀಕ್ಷಿತ ಭೇಟಿಯ ಬಗ್ಗೆ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿಗೆ ಹೋಗುವ ಅಭ್ಯಾಸ ನನಗಿಲ್ಲ ಎಂದು ಸ್ಟಷ್ಟನೆ ನೀಡಿದ ನಟ ಶ್ರೀಕಾಂತ್
ಹಲವಾರು ವರ್ಷದ ನಂತರ ಅಪರೂಪದ ಅನಿರೀಕ್ಷಿತ ಭೇಟಿ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳ ನೆನಪು ಹಂಚಿಕೊಂಡೆವು ಎಂದು ಹಳೆಯ ದಿನಗಳ ಬಗ್ಗೆ ಸಾಧು ಕೋಕಿಲ ಸ್ಮರಿಸಿದ್ದಾರೆ. ಜೊತೆಗೆ ಎ.ಆರ್ ರೆಹಮಾನ್ ಜೊತೆಗಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ತಮ್ಮ ಕೆರಿಯರನ್ ಪ್ರಾರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರೂ ದಿಗ್ಗಜರನ್ನು ಒಟ್ಟಿಗೆ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ.