ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ – 40 ಜನರ ರಕ್ಷಣೆ

Public TV
1 Min Read
Karawar Boat Capsized

ಕಾರವಾರ: ಪ್ರವಾಸಿಗರನ್ನು (Tourists) ಕರೆದೊಯ್ಯುತ್ತಿದ್ದ ಬೋಟ್ (Boat) ಪಲ್ಟಿಯಾಗಿ ನೀರುಪಾಲಾಗುತಿದ್ದ ನಲವತ್ತು ಜನ ಪ್ರವಾಸಿಗರನ್ನು ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumata) ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ನಡೆದಿದೆ.

Karawar Boat Capsized

ಮೂಡಂಗಿಯ ಗಣೇಶ, ರಮೇಶ ಎನ್ನುವವರಿಗೆ ಸೇರಿದ ಪ್ರವಾಸಿ ಬೋಟ್ ಇದಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಅನುಮತಿ ಇಲ್ಲದೇ 28 ಜನರನ್ನು ಕರೆದೊಯ್ಯುವ ಬದಲು 40 ಜನರನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರ

ಮಿತಿಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿರಿಸಿ ಕರೆದೊಯ್ದ ಕಾರಣ ಬೋಟ್ ಮಗುಚಿದೆ. ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಪ್ರವಾಸಿಗರು ಲೈಫ್ ಜಾಕೆಟ್ (Life Jacket) ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಅಕ್ಕನ ಸಾವನ್ನು ಕಣ್ಣಾರೆ ನೋಡಿದ್ರಿಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದೆ: ಮೃತ ಅಂಜಲಿ ಸಹೋದರಿ

Share This Article