ಪತ್ನಿಯ ಗುಪ್ತಾಂಗದಲ್ಲಿ ರಂಧ್ರ ಮಾಡಿ ಬೀಗ ಜಡಿದು ವಿಕೃತಿ ಮೆರೆದ ಪತಿ!

Public TV
1 Min Read
POLICE JEEP 1

ಪುಣೆ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಗುಪ್ತಾಂಗವನ್ನು ಡ್ರಿಲ್‌ ಮಾಡಿ ಬಳಿಕ ಬೀಗ ಹಾಕಿದ ವಿಚಿತ್ರ ಪ್ರಸಂಗವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಅಚ್ಚರಿ ಎನಿಸಿದರೂ ಸತ್ಯವಾಗಿರುವ ಈ ಘಟನೆ ಮಹಾರಾಷ್ಟ್ರದ (Maharastra) ಪಿಂಪ್ರಿ ಚಿಂಚ್ವಾಡದಲ್ಲಿ ನಡೆದಿದೆ. ವ್ಯಕ್ತಿಯನ್ನು ಉಪೇಂದ್ರ ಹುಡಕೆ ಎಂದು ಗುರುತಿಸಲಾಗಿದೆ. ನೇಪಾಳ ಮೂಲದ ಈತ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲಿಯೇ ಇರುತ್ತಿದ್ದಳು. ಸದ್ಯ ಪ್ರಕರಣ ಸಂಬಂಧ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

thinkstockphotos 186407421

ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಉಪೇಂದ್ರ ಅನುಮಾನಗೊಂಡಿದ್ದನು. ಹೀಗಾಗಿ ಮೇ 11 ರಂದು ಕಂಠಪೂರ್ತಿ ಕುಡಿದು ಬಂದಿದ್ದ ಉಪೇಂದ್ರ, ಪತ್ನಿಗೆ ಮನಬಂದಂತೆ ಥಳಿಸಿ, ಒದ್ದಿದ್ದಾನೆ. ಬಳಿಕ ಆಕೆಯನ್ನು ಚೂಡಿದಾರದ ಶಾಲಿನಿಂದ ಕಟ್ಟಿಹಾಕಿ ಹೇಯ ಕೃತ್ಯ ಎಸಗಿದ್ದಾನೆ.

ಹರಿತವಾದ ಬ್ಲೇಡ್‌ನಿಂದ ಗುಪ್ತಾಂಗದ ಎರಡೂ ಕಡೆ ರಂಧ್ರಗಳನ್ನು ಮಾಡಿದ್ದಾನೆ. ಕಬ್ಬಿಣದ ಸ್ಕ್ರೂಗಳನ್ನು ಹಾಕಿ ನಂತರ ಆಕೆಯ ಜನನಾಂಗದ ಪ್ರದೇಶಕ್ಕೆ ಬೀಗ ಹಾಕಿದ್ದಾನೆ. ಇತ್ತ ಪತಿಯ ನೀಚ ಕೃತ್ಯದಿಂದ ನೋವು ತಾಳಲಾರದೆ 28 ವರ್ಷದ ಪತ್ನಿ ಜೋರಾಗಿ ಕಿರುಚಾಡಿದ್ದಾಳೆ. ಆದರೂ ಪತಿ ಆಕೆಯ ಮೇಲೆ ಕಿಂಚಿತ್ತೂ ಅನುಕಂಪ ತೋರಿಸಲಿಲ್ಲ. ಇದನ್ನೂ ಓದಿ: ಅಕ್ರಮ ಮರಳು ಅಡ್ಡಾದ ಮೇಲೆ ಅಧಿಕಾರಿಗಳ ದಾಳಿ – 1.58 ಕೋಟಿ ರೂ. ಮೌಲ್ಯದ ಮರಳು ಜಪ್ತಿ

ಮಹಿಳೆಯ ಕಿರುಚಾಟ ಕೇಳಿಸಿಕೊಂಡ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದ ಒದ್ದಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಅಲ್ಲದೇ ಕೂಡಲೇ ಆಕೆಯನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ವೈದ್ಯರು ತುರ್ತು ಸರ್ಜರಿ ಮೂಲಕ ಸ್ಕ್ರೂ ಹಾಗೂ ಲಾಕ್‌ ಅನ್ನು ತೆಗೆಯುವಲ್ಲಿ ಯಶಸ್ವಿಯಾದರು.

ಪ್ರಕರಣ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Share This Article