ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಜೊತೆ ‘777 ಚಾರ್ಲಿ’ (777 Charlie) ಸಿನಿಮಾದಲ್ಲಿ ನಟಿಸಿದ ಚಾರ್ಲಿ ಈಗ 6 ಮರಿಗಳಿಗೆ ಜನ್ಮ ನೀಡಿದೆ. ಮೈಸೂರಿಗೆ ತೆರಳಿ ಚಾರ್ಲಿಯನ್ನು ಭೇಟಿಯಾಗಿ ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ:ನಿರ್ದೇಶನದತ್ತ ಐಶಾನಿ ಶೆಟ್ಟಿ- ಜೂನ್‌ನಲ್ಲಿ ಚಿತ್ರದ ಬಗ್ಗೆ ಅಧಿಕೃತ ಘೋಷಣೆ
2022ರಲ್ಲಿ ಬಿಡುಗಡೆಯಾದ ‘777 ಚಾರ್ಲಿ’ ಚಿತ್ರವು ಪ್ರೇಕ್ಷಕರಿಗೆ ಕನೆಕ್ಟ್ ಆಗಿತ್ತು. ಧರ್ಮ ಮತ್ತು ಚಾರ್ಲಿ ಕಾಂಬಿನೇಷನ್ ನೋಡಿ ಫ್ಯಾನ್ಸ್ ಕಣ್ತುಂಬಿಕೊಂಡಿದ್ದರು. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಚಾರ್ಲಿ ಮರಿಗೆ ಜನ್ಮ ನೀಡಿ ಪ್ರಾಣ ಬಿಡುತ್ತದೆ. ಈ ಸೀನ್ ನೋಡಿ ಪ್ರೇಕ್ಷಕರು ಭಾವುಕರಾಗಿದ್ದರು. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ
ಇದೀಗ ರಿಯಲ್ ಆಗಿ ಚಾರ್ಲಿ 5 ಹೆಣ್ಣು ಮರಿ, ಒಂದು ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಚಾರ್ಲಿಯನ್ನು (Charlie) ನೋಡಲು ರಕ್ಷಿತ್ ಶೆಟ್ಟಿ ಮೈಸೂರಿಗೆ ಭೇಟಿ ಮಾಡಿ ಸಂಭ್ರಮಿಸಿದ್ದಾರೆ. ಚಾರ್ಲಿ ಮತ್ತು ಮರಿಗಳ ವಿಡಿಯೋವನ್ನು ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ನಮ್ಮ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ 2 ವರ್ಷ ಆಯ್ತು. ಸಿನಿಮಾ ಬಿಡುಗಡೆ ಆದಮೇಲೆ ಚಾರ್ಲಿ ತಾಯಿ ಆಗಬೇಕು. ಅದು ಮರಿಗಳಿಗೆ ಜನ್ಮ ನೀಡಬೇಕು ಎಂಬ ಆಸೆ ನಮಗೆಲ್ಲರಿಗೂ ಇತ್ತು. ಆಗಲೇ ಅವಳ ಜರ್ನಿಗೆ ಒಂದು ಪರಿಪೂರ್ಣತೆ ಸಿಗುತ್ತದೆ ಎಂಬ ಫೀಲಿಂಗ್ ನಮ್ಮ ತಂಡಕ್ಕೆ ಇತ್ತು. ಚಾರ್ಲಿ ತಾಯಿ ಆಗಬೇಕು ಎಂಬುದನ್ನು ನಾನು ತುಂಬ ಸಮಯದಿಂದ ಎದುರು ನೋಡುತ್ತಿದ್ದೆ. ಪ್ರಮೋದ್‌ಗೆ ಫೋನ್ ಮಾಡಿದಾಗೆಲ್ಲಾ, ಇದರ ಬಗ್ಗೆ ಕೇಳ್ತಾ ಇದ್ದೆ. ವಯಸ್ಸಾಗಿದೆ ಅನುಮಾನ ಅಂತಲೇ ಅವರು ಹೇಳುತ್ತಿದ್ದರು. ಅಚ್ಚರಿ ಎಂದರೆ, ಮೇ 9ರಂದು 6 ಪಪ್ಪಿಗಳಿಗೆ ಜನ್ಮ ನೀಡಿದ್ದಾಳೆ ಚಾರ್ಲಿ. ಅವುಗಳನ್ನು ನೋಡುವುದಕ್ಕಾಗಿ ಮೈಸೂರಿಗೆ ಬಂದಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇವತ್ತಿಗೂ ಎಲ್ಲರೂ ‘777 ಚಾರ್ಲಿ’ ಸಿನಿಮಾವನ್ನು ತುಂಬ ಪ್ರೀತಿ ಮಾಡುತ್ತಿದ್ದೀರಿ. ನಾನು ಎಲ್ಲೇ ಹೋದರೂ ಚಾರ್ಲಿ (Charlie) ಬಗ್ಗೆಯೇ ಎಲ್ಲರೂ ಮಾತಾಡುತ್ತಿದ್ದಾರೆ. ಅದರಲ್ಲೂ ಮಕ್ಕಳು ಈ ಸಿನಿಮಾವನ್ನು ತುಂಬ ಇಷ್ಟಪಟ್ಟಿದ್ದಾರೆ. ನಿಮ್ಮ ಪ್ರೀತಿ ಚಾರ್ಲಿ ಮೇಲೆ ಸದಾ ಹೀಗೆ ಇರಲಿ ಎಂದು ನಟ ಹೇಳಿದ್ದಾರೆ.