ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಸ್ವದೇಶಕ್ಕೆ ಕರೆ ತರಲು ವಿಶೇಷ ತನಿಖಾ ತಂಡದ (SIT) ಮುಂದಿರುವ ಏಕೈಕ ಆಯ್ಕೆ ಅಂದ್ರೆ ಅದು ರೆಡ್ ಕಾರ್ನರ್ ನೋಟಿಸ್.
ರೆಡ್ ಕಾರ್ನರ್ ನೋಟಿಸ್ (Red Corner Notice) ಅನ್ನು ಅಷ್ಟು ಸುಲಭವಾಗಿ ಹೊರಡಿಸಲು ಸಾಧ್ಯವಿಲ್ಲ. ಬಹಳಷ್ಟು ಪ್ರಕ್ರಿಯೆ ನಡೆದ ಬಳಿಕ ಈ ನೋಟಿಸ್ ಹೊರಡಿಸಲಾಗುತ್ತದೆ. ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಟ್ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್ ಲೋಗೋ
ರೆಡ್ ಕಾರ್ನರ್ ನೋಟಿಸ್ ಹೇಗೆ ಹೊರಡಿಸಲಾಗುತ್ತೆ?
ಪ್ರಜ್ವಲ್ ರೇವಣ್ಣ ಬಂಧನವಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಪಟ್ಟಿ (Absconding Chargesheet) ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು. ಆಗ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಮನ್ಸ್ ಜಾರಿ ಮಾಡುತ್ತದೆ. ಈ ವೇಳೆ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಎಸ್‌ಐಟಿ ಮಾಹಿತಿ ನೀಡುತ್ತದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕಣ್ಣಾಮುಚ್ಚಾಲೆ ಆಟ – ವಿಮಾನ ನಿಲ್ದಾಣದಿಂದ ಬರಿಗೈಯಲ್ಲಿ ಪೊಲೀಸರು ವಾಪಸ್
ಸಮನ್ಸ್‌ಗೆ ಗೈರಾದರೆ ಪ್ರಜ್ವಲ್ ಪತ್ತೆಗೆ ಕೋರ್ಟ್ ಅನುಮತಿಯೊಂದಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐಗೆ ಎಸ್‌ಐಟಿ ಮನವಿ ಮಾಡುತ್ತದೆ. ಬಳಿಕ ಸಿಬಿಐ ಇಂಟರ್‌ಪೋಲ್ (Interpol) ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸುತ್ತದೆ. ರೆಡ್ ಕಾರ್ನರ್ ನೋಟಿಸ್ ಜಾರಿಯಾದ್ರೆ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೋ ಆ ದೇಶದ ಪೊಲೀಸರೇ ಅವರನ್ನು ವಶಕ್ಕೆ ಪಡೆಯಲು ಅನುಮತಿ ನೀಡುತ್ತದೆ. ವಶಕ್ಕೆ ಪಡೆದ ನಂತರ ಆ ದೇಶದ ಪೊಲೀಸರು ಭಾರತಕ್ಕೆ ಒಪ್ಪಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆ ನಡೆಸಬೇಕಾದರೆ ಎಸ್‌ಐಟಿಗೆ ಕನಿಷ್ಠ 40 ದಿನ ಬೇಕಾಗಬಹುದು.
ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಿಲ್ಲ ಯಾಕೆ?
ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕಾರಣ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿ ಹೋಗಿದ್ದಾರೆ. ಹೀಗಾಗಿ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಅಷ್ಟು ಸುಲಭವಾಗಿ ರದ್ದು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಿಂದ ಆದೇಶ ಬಂದ ಬಳಿಕವಷ್ಟೇ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಬಹುದಾಗಿದೆ.