‘ಲವ್ ಲಿ’ ಚಿತ್ರದ ಲವ್ಲಿ ಹಾಡಿಗೆ ದನಿಯಾದ ವಸಿಷ್ಠ ಸಿಂಹ

Public TV
1 Min Read
vasista simha

ಸ್ಯಾಂಡಲ್‌ವುಡ್ ನಟ ಕಮ್ ಗಾಯಕ ವಸಿಷ್ಠ ಸಿಂಹ (Vasista Simha) ಇದೀಗ ‘ಲವ್ ಲಿ’ (Loveli Film) ಚಿತ್ರದ ‘ಬಯಸಿ ಬಯಸಿ’ ಎಂಬ ಹಾಡಿಗೆ ದನಿಯಾಗಿದ್ದಾರೆ. ‘ಮರೆತೆ ಹೋದೇನು’ ಎಂದು ಹಾಡಿದ್ದ ವಸಿಷ್ಠ ಈಗ ಹೊಸ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಇದನ್ನೂ ಓದಿ:ಅಂದು ವಿಜಯ್, ಇಂದು ಮಗಳಿಗೆ ದುನಿಯಾ ಸೂರಿ ಸಿನಿಮಾ

FotoJet 19

‘ಲವ್ ಲಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ವಸಿಷ್ಠ ಸಿಂಹ ಇದೀಗ ಮತ್ತೊಮ್ಮೆ ಗಾಯಕನಾಗಿ ಸದ್ದು ಮಾಡಿದ್ದಾರೆ. ಸಮುದ್ರ ತೀರದಲ್ಲಿ ಕುಳಿತು ನಾಯಕಿಯನ್ನು ಹಾಡಿನ ಮೂಲಕ ವಸಿಷ್ಠ ಬಣ್ಣಿಸಿದ್ದಾರೆ. ಚೇತನ್ ಕೇಶವ್ ಮತ್ತು ಪ್ರಜ್ವಲ್ ಕೆ.ಪಿ ಬರೆದ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

 

View this post on Instagram

 

A post shared by Vasishta N Simha (@imsimhaa)

ವಸಿಷ್ಠ ಸಿಂಹ ತಮ್ಮ ಧ್ವನಿಯನ್ನ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಹಾಗಾಗಿಯೇ ಸಖತ್ ಆಗಿಯೇ ಡೈಲಾಗ್ ಹೊಡೆಯುತ್ತಾರೆ. ಹಾಡು ಅಂತ ಬಂದರೆ ಅದ್ಭುತವಾಗಿ ಹಾಡುತ್ತಾರೆ. ಆ ಲೆಕ್ಕದಲ್ಲಿ ಒಂದಷ್ಟು ಸಿನಿಮಾಗಳಿಗೆ ವಸಿಷ್ಠ ಸಿಂಹ ಹಾಡಿದ್ದಾರೆ. ಸದ್ಯ ಈ ಚಿತ್ರದ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಈ ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸಿದ್ದಾರೆ. ‘ಲವ್ ಲಿ’ ಒಂದು ದಶಕದ ಹಿಂದೆ ನಡೆದ ನೈಜ ಘಟನೆಗಳನ್ನು ಆಧರಿಸಿದ ಕಮರ್ಷಿಯಲ್ ರೊಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಇದು ಯುವಕನ ಜೀವನದ ಬಗ್ಗೆ ಮತ್ತು ಪ್ರೀತಿಯಲ್ಲಿ ಬಿದ್ದ ನಂತರ ಅದು ಹೇಗೆ ಬದಲಾಗುತ್ತದೆ ಎಂಬುದೇ ಈ ಸಿನಿಮಾ. ಅಂದಹಾಗೆ, ಈ ಚಿತ್ರವನ್ನು ರವೀಂದ್ರ ಕುಮಾರ್‌ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್‌ ಆಗಲಿದೆ.

Share This Article