ವಿಜಯ್ ದೇವರಕೊಂಡಗೆ ವಿಲನ್‌ ಆದ ಚಿಯಾನ್ ವಿಕ್ರಮ್ ಪುತ್ರ

Public TV
1 Min Read
dhruv vikram 1

‘ಫ್ಯಾಮಿಲಿ ಸ್ಟಾರ್’ (Family Star) ನಂತರ ವಿಜಯ್ ದೇವರಕೊಂಡ (Vijay Devarakonda)  ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಜಯ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ಚಿಯಾನ್ ವಿಕ್ರಮ್ ಪುತ್ರ ಧ್ರುವ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿದೆ.

rashmika mandanna

‘ಶ್ಯಾಮ್ ಸಿಂಗ್ ರಾಯ್’ ಸಿನಿಮಾದ ನಿರ್ದೇಶಕ ರಾಹುಲ್  ಜೊತೆ ವಿಜಯ್ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್‌ನಲ್ಲಿ ವಿಜಯ್‌ಗೆ ವಿಲನ್ ಆಗಿ ಧ್ರುವ ವಿಕ್ರಮ್ (Dhruv Vikram) ಠಕ್ಕರ್ ಕೊಡಲಿದ್ದಾರಂತೆ. ವಿಜಯ್ ಮತ್ತು ಧ್ರುವ ಡೆಡ್ಲಿ ಕಾಂಬಿನೇಷನ್ ಬಗ್ಗೆ ಈಗ ಟಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

dhruv vikram

ಅಂದಹಾಗೆ, ಮೊದಲ ಬಾರಿಗೆ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. 1854- 78ರ ಕಾಲಘಟ್ಟದ ಕಥೆ ಇದಾಗಿದ್ದು, ವಿಜಯ್ ತಂದೆ ಮತ್ತು ಮಗನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸಿಕ್ತು ಗೋಲ್ಡನ್ ಚಾನ್ಸ್- ಸ್ಟಾರ್‌ ನಟನಿಗೆ ಕೀರ್ತಿ ಸುರೇಶ್‌ ನಾಯಕಿ

ಈಗಾಗಲೇ ಚಿತ್ರದ ಪೋಸ್ಟರ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಚಿತ್ರವನ್ನು 120 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಡಬಲ್ ರೋಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ, ವಿಜಯ್ ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಳ್ತಿದ್ದಾರೆ.‌ ವಿಜಯ್‌ ಮತ್ತು ರಶ್ಮಿಕಾ ಎದುರು ಖಳನಟನಾಗಿ ಅಬ್ಬರಿಸಲಿರುವ ಧ್ರುವ ವಿಕ್ರಮ್‌ರನ್ನು ನೋಡಲು ಫ್ಯಾನ್ಸ್‌ ಕಾಯ್ತಿದ್ದಾರೆ.

Share This Article