ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ – ಆನಂದ್ ಮಹೀಂದ್ರಾ ಮೆಚ್ಚುಗೆ

Public TV
1 Min Read
Anand Mahindras Praise For IIT Madras Startup That Will Develop Flying Electric

ಚೆನೈ: ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು (Flying Electric Taxi) ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT-Madras) ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಅವರು ಶ್ಲಾಘಿಸಿದ್ದಾರೆ.

ಮುಂದಿನ ವರ್ಷದ ವೇಳೆಗೆ ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿಯನ್ನು ನಿರ್ಮಿಸಲು ಮದ್ರಾಸ್‍ನ ಐಐಟಿ ಮುಂದಾಗಿದೆ. ಈ ಬೆಳವಣಿಗೆಯಿಂದ ನಾವು ಇನ್ನು ಮುಂದೆ ಆವಿಷ್ಕಾರಕರ ಕೊರತೆಯಿರುವ ದೇಶವಾಗಿ ಉಳಿಯುವುದಿಲ್ಲ. ಮದ್ರಾಸ್ ವಿಶ್ವದ ಅತ್ಯಂತ ಸಕ್ರಿಯ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯ ಸಾಧನೆಗೆ ಧನ್ಯವಾದಗಳು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪಾಕ್ ಅಣುಬಾಂಬ್ ತೋರಿಸಿ ಕಾಂಗ್ರೆಸ್ ದೇಶವನ್ನು ಹೆದರಿಸ್ತಿದೆ: ಮೋದಿ ವಾಗ್ದಾಳಿ

ಐಐಟಿ ಮದ್ರಾಸ್ 2023-24ರ ಹಣಕಾಸು ವರ್ಷದಲ್ಲಿ ತನ್ನ ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ದಾನಿಗಳಿಂದ 513 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ. ಈ ಹಣವನ್ನು ಸಂಶೋಧನಾ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಐಐಟಿ ಮುಂದಾಗಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಪ್ರಧಾನಿಯಾಗಲ್ಲ: ಅರವಿಂದ್ ಕೇಜ್ರಿವಾಲ್ ಭವಿಷ್ಯ

Share This Article