ಕಮಲ್-ಮಣಿರತ್ನಂ ಟೀಮ್ ಸೇರಿಕೊಂಡ ಸಿಲಂಬರಸನ್

Public TV
1 Min Read
Silambarasan

ಮೂರು ದಶಕಗಳ ನಂತರ ಲೆಜೆಂಡರಿ ನಟ ಕಮಲ್ ಹಾಸನ್ (Kamal Haasan) ಮತ್ತು ನಿರ್ದೇಶಕ ಮಣಿರತ್ನಂ (Mani Ratnam) ಜೋಡಿ ಮತ್ತೆ ಒಂದಾಗಿರುವುದು ಗೊತ್ತೇ ಇದೆ. 36 ವರ್ಷಗಳ ಹಿಂದೆ ಗ್ಯಾಂಗ್‌ಸ್ಟರ್ ಸಿನಿಮಾ ‘ನಾಯಕನ್’ ಬಿಡುಗಡೆಯಾಗಿ ಕಮಾಲ್ ಮಾಡಿತ್ತು. ಅದೇ ವೈಭವ ಮತ್ತೆ ಸೃಷ್ಟಿಸಲು ಈ ಸೂಪರ್ ಹಿಟ್ ಜೋಡಿ ಕೈ ಜೋಡಿಸಿದೆ. ಈ ಬಾರಿ ‘ಥಗ್ ಲೈಫ್’ ಮೂಲಕ ಕಮಲ್-ಮಣಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಟೈಟಲ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರಕ್ಕೀಗ ತಮಿಳಿನ ಖ್ಯಾತ ನಟ ಸಿಲಂಬರಸನ್ (Silambarasan) ಎಂಟ್ರಿ ಕೊಟ್ಟಿದ್ದಾರೆ.

Mani Ratnam Kamal Haasan

ಥಗ್ ಲೈಫ್ ತಂಡಕ್ಕೀಗ ಸಿಲಂಬರಸನ್ ಸೇರ್ಪಡೆಯಾಗಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸಿಂಗ್ ಮಾಡುತ್ತಾ ಬುಲೆಟ್ ಫೈರ್ ಮಾಡುವ ಸಿಲಂಬರಸನ್ ಝಲಕ್ ಬಿಡುಗಡೆ ಮಾಡಿದೆ ಚಿತ್ರತಂಡ ಅವರನ್ನು ಸ್ವಾಗತಿಸಿದೆ. ಇನ್ನು, ನಟಿ ತ್ರಿಶಾ, ಮತ್ತು ಜಯರಾಮ್‌ ರವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿ ರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಅವರು ಜತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ.   ಎಆರ್‌ ರೆಹಮಾನ್‌ ಸಂಗೀತ,  ಶ್ರೀಕರ್‌ ಪ್ರಸಾದ್‌ ಅವರು ಸಂಕಲನದ ಹೊಣೆ ಹೊತ್ತಿದ್ದಾರೆ. ರವಿ ಕೆ. ಚಂದ್ರನ್‌ ಅವರ ಕೊರಿಯೊಗ್ರಫಿ  ಥಗ್ ಲೈಫ್ ಸಿನಿಮಾಕ್ಕಿದೆ.

Share This Article