ಬೆಂಗಳೂರು: ಸಂತ್ರಸ್ತೆಯ ಅಪಹರಣ (Kidnap Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನಾಯಾಂಗ ಬಂಧನದಲ್ಲಿರುವ (Judicial Custody) ಹೆಚ್‌ಡಿ ರೇವಣ್ಣ (HD Revanna) ಸೋಮವಾರದವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ರೇವಣ್ಣ ಸಲ್ಲಿಸಿದ್ದ ಜಾಮೀನು (Bail) ಅರ್ಜಿಯ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.
ವಿಶೇಷ ತನಿಖಾ ತಂಡ (SIT) ಮತ್ತು ರೇವಣ್ಣ ಕಡೆಯ ವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಹೀಗಾಗಿ ಮೇ 13ರ ವರೆಗೂ ಪರಪ್ಪನ ಅಗ್ರಹಾರದಲ್ಲೇ ರೇವಣ್ಣ ಇರಬೇಕಾಗುತ್ತದೆ.
ಗುರುವಾರ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ರೇವಣ್ಣಗೆ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.