‘ಬಿಗ್ ಬಾಸ್ ಕನ್ನಡ ಸೀಸನ್ 5’ರ (Bigg Boss Kannada 5) ಮೂಲಕ ಗಮನ ಸೆಳೆದ ಶ್ರುತಿ ಪ್ರಕಾಶ್ (Shruti Prakash) ಅವರು ಸದ್ಯ ಬಾಲಿವುಡ್‌ಗೆ ಹಾರಿದ್ದಾರೆ. ಖ್ಯಾತ ನಿರ್ದೇಶಕನ ಸಿನಿಮಾದಲ್ಲಿ ನಾಯಕಿಯಾಗಿ ಬಿಟೌನ್‌ಗೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್
ಬಾಲಿವುಡ್‌ನಲ್ಲಿ (Bollywood) ಹಲವು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ವಿಕ್ರಮ್ ಭಟ್ (Vikram Bhatt) ಅವರು ‘ಹಾಂಟೆಡ್ 2’ (Haunted 2) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಆನಂದ್ ಪಂಡಿತ್ (Anand Pandit) ನಿರ್ಮಾಣ ಮಾಡಿದ್ದಾರೆ. ಇದು ಹಾಂಟೆಡ್ ಚಿತ್ರದ ಸೀಕ್ವೆಲ್ ಆಗಿದೆ.
‘ಹಾಂಟೆಡ್ 2’ (Haunted 2) ಸಿನಿಮಾದಲ್ಲಿ ಮಿಮೋಹ್ ಚಕ್ರವರ್ತಿಗೆ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಶ್ರುತಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದ್ದು, ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಶೋ ಬಳಿಕ ಕಸ್ತೂರಿ ಮಹಲ್, ಕಡಲ ತೀರದ ಭಾರ್ಗವ, ಲಂಡನ್‌ನಲ್ಲಿ ಲಂಬೋದರ, ಗ್ರೇ ಗೇಮ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಶ್ರುತಿ ಪ್ರಕಾಶ್ ನಟಿಸಿದ್ದಾರೆ.