ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಇಂದು (ಮೇ.7) (Lokasabha Election 2024) ನಡೆಯುತ್ತಿದ್ದು, ಸ್ಯಾಂಡಲ್‌ವುಡ್ ತಾರೆಯರು (Sandalwood Actors) ಕೂಡ ಮತ (Vote) ಚಲಾಯಿಸುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ:ದರ್ಶನ್ ಫ್ಯಾನ್ಸ್ ಗೆ ಭರ್ಜರಿ ನ್ಯೂಸ್: ಮೇ 10ಕ್ಕೆ ‘ಡೆವಿಲ್’ ಮೇಕಿಂಗ್ ವಿಡಿಯೋ ರಿಲೀಸ್
‘ಪದವಿ ಪೂರ್ವ’ (Padavi Poorva) ಸಿನಿಮಾದ ನಟ ಪೃಥ್ವಿ ಶಾಮನೂರು (Pruthvi Shamanur) ಅವರು ತಮ್ಮ ಕುಟುಂಬದ ಜೊತೆ ದಾವಣಗೆರೆಯಲ್ಲಿ ವೋಟ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಟಿ ಶ್ವೇತಾ ಆರ್. ಪ್ರಸಾದ್ ವೋಟ್ ಮಾಡಿದ್ದು, ಅಭಿಮಾನಿಗಳಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
View this post on Instagram
ಸ್ಯಾಂಡಲ್‌ವುಡ್ ನಟ ಬಿ.ಸಿ ಪಾಟೀಲ್ (B.c Patil) ಅವರು ಕೂಡ ತಮ್ಮ ಕುಟುಂಬದ ಜೊತೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಮೇ.7) ಕುಟುಂಬ ಸಮೇತವಾಗಿ ಹಿರೇಕೆರೂರಿನ ಬಾಳಂಬೀಡ ಗ್ರಾಮದ ಮತಗಟ್ಟೆಗೆ ತೆರಳಿ ಮತ ಚಲಾಯಿಸಲಾಯಿತು ಎಂದು ನಟ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಟಿ ಸೃಷ್ಟಿ ಪಾಟೀಲ್ (Shrusti Patil) ಅವರು ಹಿರೇಕೆರೂರಿನ ಬಾಳಂಬೀಡ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಎಲ್ಲರೂ ಮತದಾನ ಎಂದು ನಟಿ ಮನವಿ ಮಾಡಿದ್ದಾರೆ.