ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ (Pen Drive Case) 16 ವರ್ಷದವರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿಕೆ ನೀಡಿದ್ದಾರೆ. ಹೀಗಾಗಿ ಯಾಕೆ ರಾಹುಲ್ ಗಾಂಧಿಗೆ ನೋಟಿಸ್ ನೀಡಿಲ್ಲ ಎಂದು ವಿಶೇಷ ತನಿಖಾ ತಂಡವನ್ನು (SIT) ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದ್ದಾರೆ.
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಹುಲ್ ಗಾಂಧಿ ಮಹಾನುಭವ ಈ ಪ್ರಕರಣದಲ್ಲಿ 16 ವರ್ಷದ ಅಪ್ರಾಪ್ತರು ಇದ್ದಾರೆ ಎಂದು ಹೇಳಿದ್ದಾರೆ. ಇದು ಗಂಭೀರ ಆರೋಪ. ಪೋಕ್ಸೋ ಪ್ರಕರಣ (Pocso Case) ಸಾಬೀತಾದರೆ ಜೀವನಪರ್ಯಂತ ಜೈಲು ಶಿಕ್ಷೆಯಾಗುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ಅಪ್ರಾಪ್ತರು ಹೇಳಿಕೆ ನೀಡಿಲ್ಲ ಯಾಕೆ? ಯಾವ ಆಧಾರದಲ್ಲಿ ರಾಹುಲ್ ಗಾಂಧಿ ಹೇಳಿಕೆ ಕೊಟ್ಟ ಎಂದು ಪ್ರಶ್ನಿಸಿ ಏಕವಚನದಲ್ಲೇ ಕುಮಾರಸ್ವಾಮಿ ಕಿಡಿಕಾರಿದರು. ಇದನ್ನೂ ಓದಿ: ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್‍ಡಿಕೆ
ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದಾಗ ಪ್ರಕರಣದ ವಿಚಾರಣೆಗೆ ಸಾಕ್ಷಿಯನ್ನಾಗಿ ಪರಿಗಣಿಸಿ ಅವರನ್ನು ಕರೆಯಬೇಕಿತ್ತು. ಎಸ್‌ಐಟಿ ಯಾಕೆ ಇನ್ನೂ ನೋಟಿಸ್ ನೀಡಿಲ್ಲ? ಈಗ ಪೋಕ್ಸೋ ಪ್ರಕರಣ ದಾಖಲು ಮಾಡಲು 16 ವರ್ಷದ ಅಪ್ರಾಪ್ತರನ್ನು ಹುಡುಕಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Jharkhand: 35 ಕೋಟಿಗೂ ಅಧಿಕ ಹಣ ಜಪ್ತಿ – ಇಡಿಯಿಂದ ಕಾಂಗ್ರೆಸ್ ಸಚಿವರ ಆಪ್ತ ಕಾರ್ಯದರ್ಶಿ, ಮನೆಕೆಲಸದವನ ಬಂಧನ!
ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗ್ಯಾರಂಟಿ ಹಿಡಿಯುವುದಿಲ್ಲ ಅಂತ ಗೊತ್ತಾಗಿದೆ. ಈಗ ಈ ವಿಷಯದಲ್ಲಿ ಅಮಿತ್ ಶಾ, ಮೋದಿ (Narendra Modi) ಅವರನನ್ನು ಎಳೆದು ತಂದು ದೇಶವ್ಯಾಪಿ ಪ್ರಚಾರಕ್ಕೆ ಕಾಂಗ್ರೆಸ್ ಬಳಸುತ್ತಿದೆ. ಭಾರತ ಮಾತ್ರವಲ್ಲ ಸಿಂಗಾಪುರ್ ಸೇರಿದಂತೆ ವಿದೇಶದ ವಾಹಿನಿಗಳಲ್ಲೂ ಸುದ್ದಿ ಬಂದಿದೆ. ಪೆನ್ ಡ್ರೈವ್ ನಲ್ಲಿ ಫೋಟೋ ಹಾಕಿ ಸೃಷ್ಟಿ ಮಾಡಿ ಬೀದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್, ರೆಡ್ ಕಾರ್ನರ್ ನೋಟಿಸ್ ಏನೋ ಮಾತನಾಡುತ್ತೀರಿ ಅಲ್ವಾ? ಅದೇ ರೀತಿ ರಾಜ್ಯಾದ್ಯಂತ ಪೆನ್ ಡ್ರೈವ್ ರಿಲೀಸ್ ಮಾಡಿ ಮಹಿಳೆಯರ ಮಾನ ಹರಾಜು ಹಾಕಿದ ವ್ಯಕ್ತಿಗಳ ಬಂಧನಕ್ಕೆ ಯಾವ ಬಣ್ಣದಲ್ಲಿ ನೋಟಿಸ್ ನೀಡಿದ್ದೀರಿ. ಯಾಕೆ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.