ರಾಯಚೂರು, ಬೀದರ್‌ನಲ್ಲಿ ಕೈಕೊಟ್ಟ ಮತಯಂತ್ರಗಳು – ಅಧಿಕಾರಿಗಳಿಗೆ ಮತದಾರರು ತರಾಟೆ

Public TV
1 Min Read
bidar evm problem

ರಾಯಚೂರು/ಬೀದರ್‌: ರಾಜ್ಯದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗಿದ್ದು, ಹಲವೆಡೆ ಮತಯಂತ್ರಗಳು ಕೈಕೊಟ್ಟಿವೆ. ಇದರಿಂದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಬೇಕಿತ್ತು. ಆದರೆ ಬೀದರ್‌ ನಗರದ ನ್ಯಾಷನಲ್ ಕಾಲೇಜಿನರುವ ಮತಗಟ್ಟೆ ಸಂಖೆ 151 ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದು ಹಿನ್ನೆಲೆ ಮತದಾನ ಪ್ರಾರಂಭವಾದರೂ ಇನ್ನೂ ಮತದಾನ ನಡೆಯದ ಕಾರಣ ಮತದಾರರು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ‌‌‌.

ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ದೋಷ ಸರಿಪಡಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ನೀವು ಏನು ಕೆಲಸ ಮಾಡುತ್ತಿದ್ದೀರಿ.. ಮೊದಲೇ ನೋಡೋಕೆ ಆಗಲ್ವಾ ಎಂದು ಮತದಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಂದೆಡೆ ರಾಯಚೂರಿನ ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮತದಾನ ಮಾಡಲು ಮತಗಟ್ಟೆ ಕೇಂದ್ರ ಮುಂದೆ ಜನ ಕಾದು ಕುಳಿದ ಪ್ರಸಂಗ ನಡೆಯಿತು. ಸಿಬ್ಬಂದಿ ಮತ ಯಂತ್ರ ಸರಿಪಡಿಸುತ್ತಿದ್ದಾರೆ.

Share This Article