ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ- ಅಪ್ರಾಪ್ತ ಸಾವು, ಇಬ್ಬರು ಗಂಭೀರ

Public TV
1 Min Read
West Bengal Bomb Blast Hooghly

ಕೋಲ್ಕತ್ತಾ: ಬಾಂಬ್ ಸ್ಫೋಟಗೊಂಡು (Bomb Blast) ಓರ್ವ ಅಪ್ರಾಪ್ತ ಮೃತಪಟ್ಟಿದ್ದು, ಇಬ್ಬರು ಅಪ್ರಾಪ್ತರು ಗಂಭೀರ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ (West Bengal) ಹೂಗ್ಲಿ (Hooghly) ಜಿಲ್ಲೆಯಲ್ಲಿ ನಡೆದಿದೆ.

ಪಾಂಡುವಾ (Panduva) ನೇತಾಜಿಪಲ್ಲಿ ಕಾಲೋನಿಯ ಕೊಳದ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭ ಸ್ಫೋಟ ಸಂಭವಿಸಿದೆ. ಏಕಾಏಕಿ ಆ ಪ್ರದೇಶದಲ್ಲಿ ಭಾರೀ ಶಬ್ದ ಕೇಳಿಬಂದಿದೆ. ತಕ್ಷಣವೇ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ನೋಡಿದಾಗ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗಮನಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದ್ದು, ರೂಪಮ್ ಬಲ್ಲವ್ (13) ಮತ್ತು ಸೌರವ್ ಚೌಧರಿ (8) ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಹಿಳೆ ಕಿಡ್ನಾಪ್ ಕೇಸ್- ಎ2 ಆರೋಪಿ ಸತೀಶ್ ಬಾಬು 8 ದಿನ ಎಸ್‍ಐಟಿ ಕಸ್ಟಡಿಗೆ

ಸ್ಫೋಟ ಸಂಭವಿಸಿದ ವೇಳೆ ಮೂವರು ಬಾಲಕರನ್ನು ಪಾಂಡುವಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ರಾಜ್ ಬಿಸ್ವಾಸ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚುಂಚೂರ ಇಮಾಂಬರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೂಗ್ಲಿ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತ- ಶಿಕ್ಷಕ ದುರ್ಮರಣ

Share This Article