ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?

Public TV
1 Min Read
HD Revanna house bengaluru basavanagudi

ಬೆಂಗಳೂರು: ಹೆಚ್‌ಡಿ ರೇವಣ್ಣ (HD Revanna) ಮತ್ತು ಪ್ರಜ್ವಲ್‌ ರೇವಣ್ಣ (Prajwal Revanna) ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದ ಸಂತ್ರಸ್ತೆಯನ್ನು ಇಂದು ಬಸವನಗುಡಿಯಲ್ಲಿರುವ (Basavanagudi) ರೇವಣ್ಣ ನಿವಾಸಕ್ಕೆ ಕರೆತಂದು ವಿಶೇಷ ತನಿಖಾ ದಳ(SIT) ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ರೇವಣ್ಣ ನಿವಾಸಕ್ಕೆ ನಾಲ್ವರು ಮಹಿಳಾ ಅಧಿಕಾರಿಗಳು ಸೇರಿ ಆರು ಮಂದಿ ಅಧಿಕಾರಿಗಳ ತಂಡದೊಂದಿಗೆ ಸಂತ್ರಸ್ತೆ ಆಗಮಿಸಿದರು. ಈ ವೇಳೆ ಸಂತ್ರಸ್ತೆಯ ಹೇಳಿಕೆ ಸೇರಿದಂತೆ ಎಲ್ಲಾ ಮಹಜರು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಯಿತು.  ಇದನ್ನೂ ಓದಿ: T20 ವಿಶ್ವಕಪ್‌ ಟೂರ್ನಿ ಮೇಲೆ ಉಗ್ರರ ಕರಿನೆರಳು – ಪಾಕ್‌ನಿಂದ ಭಯೋತ್ಪಾದಕ ದಾಳಿ ಬೆದರಿಕೆ!

 

ಮಹಜರು ನಡೆಸುವ ಮೊದಲು ಮುಂಜಾಗ್ರತಾ ಕ್ರಮವಾಗಿ ರೇವಣ್ಣ ನಿವಾಸಕ್ಕೆ ಬ್ಯಾರಿಕೇಡ್‌ ಹಾಕಲಾಗಿತ್ತು.  ಬಸವನಗುಡಿ ಪೊಲೀಸರು ಸ್ಥಳದಲ್ಲಿ ಬಿಗಿಭದ್ರತೆ ಕಲ್ಪಿಸಿದ್ದರು. ಇದನ್ನೂ ಓದಿ: ಚುನಾವಣೆ ಸಮಯದಲ್ಲೇ ಇಡಿಯಿಂದ ದೊಡ್ಡ ಬೇಟೆ – ಕಂತೆ ಕಂತೆ ನೋಟು ಪತ್ತೆ

ಸಂತ್ರಸ್ತೆಯ ಆರೋಪ ಏನು?
ರೇವಣ್ಣ ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸಿ ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಮನೆಯ ಸ್ಟೋರ್ ರೂಂನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಪ್ರಜ್ವಲ್ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆಯನ್ನು ಮುಟ್ಟುತ್ತಿದ್ದರು. ಇದೇ ರೀತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆ ದೂರು ನೀಡಿದ್ದರು.

 

ತನ್ನ ಮಗಳ ಪೋನ್ ಗೆ ಹಲವು ಬಾರಿ ಪ್ರಜ್ವಲ್ ರೇವಣ್ಣ ವಿಡಿಯೋ ಕಾಲ್ ಮಾಡಿ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದಿಸಲು ಯತ್ನಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು. ಈ ದೂರಿನ ಅನ್ವಯ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ಕಿರುಕುಳ ಸೆಕ್ಷನ್ ಅಡಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳೆದ ಎರಡು ದಿನಗಳ ಹಿಂದೆ ಹೊಳೆನರಸೀಪುರ ನಿವಾಸದಲ್ಲಿ ಮಹಜರ್ ನಡೆಸಿದ್ದ ಎಸ್‌ಐಟಿ ಇಂದು ರೇವಣ್ಣ ಅವರ ಬಸವನಗುಡಿ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆತಂದು ಮಹಜರು ಮಾಡಿದ್ದಾರೆ.

Share This Article