ಸೇಡಂ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕ ನಾಗರೆಡ್ಡಿ ಪಾಟೀಲ್‌ ನಿಧನ

Public TV
1 Min Read
Former Sedam Congress MLA Dr Nagareddy Patil passes away Kalaburagi

ಕಲಬುರಗಿ: ಸೇಡಂ (Sedam) ಮಾಜಿ ಶಾಸಕ ಹಾಗೂ ಕಾಂಗ್ರೆಸ್ (Congress) ಮುಖಂಡ ಡಾ ನಾಗರೆಡ್ಡಿ ಪಾಟೀಲ್ (79) ಇಂದು ನಿಧನರಾಗಿದ್ದಾರೆ.

ಇಂದು ಬೆಳಗಿನ ಜಾವ 3 ಗಂಟೆಗೆ ಸೇಡಂ ಪಟ್ಟಣದಲ್ಲಿ ತಮ್ಮ ನಿವಾಸದಲ್ಲಿ ನಾಗರೆಡ್ಡಿ ಪಾಟೀಲ್ (Dr Nagareddy Patil) ವಿಧಿವಶರಾದರು.  ಇದನ್ನೂ ಓದಿ: ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಬಂದ್‌ – ಕಚೇರಿ ಮೇಲೆ ದಾಳಿ

ನಾಗರೆಡ್ಡಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್‌ರ ತಂದೆಯಾಗಿದ್ದಾರೆ. ಇಂದು ಮಧ್ಯಾಹ್ನ 3:30ಕ್ಕೆ ಸೇಡಂ ಪಟ್ಟಣದಲ್ಲಿರುವ ಸ್ವತಃ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 1983 ರಿಂದ 85 ರ ಅವಧಿಯಲ್ಲಿ ಎರಡೂವರೆ ವರ್ಷ ನಾಗರೆಡ್ಡಿ ಪಾಟೀಲ್‌ ಶಾಸಕರಾಗಿದ್ದರು.

Share This Article