ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಬಂದ್‌ – ಕಚೇರಿ ಮೇಲೆ ದಾಳಿ

Public TV
1 Min Read
Israel Parliament passed law to ban Al Jazeera news channel. PM Netanyahu called it a terrorist channel

ಟೆಲ್‌ ಅವಿವ್‌: ಕತಾರ್‌ ಮೂಲದ ಅಲ್‌ ಜಜೀರಾ (Al Jazeera) ಸುದ್ದಿ ವಾಹಿನಿ ಇಸ್ರೇಲ್‌ನಲ್ಲಿ ಸಂಪೂರ್ಣ ನಿಷೇಧವಾಗಿದೆ. ನಿಷೇಧವಾದ ಬೆನ್ನಲ್ಲೇ ವಾಹಿನಿಯ ಜೇರುಸಲೇಂನಲ್ಲಿರುವ ಕಚೇರಿ ಮೇಲೆ ದಾಳಿ ಇಸ್ರೇಲ್‌ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇಸ್ರೇಲ್‌ ಸಂಸತ್ತು (Israel Parliament) ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವ ಮಸೂದೆಯನ್ನು ಕಳೆದ ತಿಂಗಳು ಪಾಸ್‌ ಮಾಡಿತ್ತು. ಇದನ್ನೂ ಓದಿ: ಮಂಗನಕಾಯಿಲೆಗೆ ಐದು ವರ್ಷದ ಮಗು ಬಲಿ

ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ನಡೆಸಿದ ದಾಳಿಯನ್ನು ಅಲ್‌ ಜಜೀರಾ ಖಂಡಿಸಿ ನಿರಂತರ ಸುದ್ದಿ ಪ್ರಸಾರ ಮಾಡುತ್ತಿತ್ತು. ಇದು ಇಸ್ರೇಲ್‌ ಕೆಂಗಣ್ಣಿಗೆ ಗುರಿಯಾಗಿತ್ತು.

Israeli Attack

ಈ ಮಸೂದೆ ಸರ್ಕಾರಕ್ಕೆ  ಇಸ್ರೇಲ್‌ನಿಂದ ಸುದ್ದಿ ವಾಹಿನಿಯ ಪ್ರಸಾರವನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ. ಮತಕ್ಕೆ ಹಾಕಿದಾಗ 70 ಮಂದಿ ಸಂಸದರು ಒಪ್ಪಿಗೆ ನೀಡಿದರೆ 10 ಮಸೂದೆಯನ್ನು ವಿರೋಧಿಸಿದ್ದರು. ಮಸೂದೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ವಿದೇಶಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಅಧಿಕಾರದ ಜೊತೆ ಇಸ್ರೇಲ್‌ನಲ್ಲಿ ಅವರ ಕಚೇರಿ ಮುಚ್ಚಲು ಅನುಮತಿ ನೀಡುತ್ತದೆ.

ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದ ಕೂಡಲೇ ಇಸ್ರೇಲ್‌ನಲ್ಲಿ ಅಲ್ ಜಜೀರಾ ನಿಷೇಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ನೆತನ್ಯಾಹು (PM Benjamin Netanyahu) ಈ ಹಿಂದೆ ಪ್ರತಿಜ್ಞೆ ಮಾಡಿದ್ದರು. ಅಲ್ ಜಜೀರಾವನ್ನು ಉಗ್ರರ ವಾಹಿನಿ ಎಂದು ನೆತನ್ಯಾಹು ಕರೆದಿದ್ದಾರೆ. ಇದನ್ನೂ ಓದಿ: ಹಾಸನದ ಲೈಂಗಿಕ ಹಿಂಸೆ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

Israel 11

ಗಾಜಾದಲ್ಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲ್ ಜಜೀರಾ ಸಿಬ್ಬಂದಿ ಪತ್ರಕರ್ತ ಮತ್ತು ಸ್ವತಂತ್ರ ಉದ್ಯೋಗಿ ಭಯೋತ್ಪಾದಕರು ಎಂದು ಇಸ್ರೇಲ್ ಜನವರಿಯಲ್ಲಿ ಹೇಳಿಕೊಂಡಿತ್ತು. ಗಾಯಗೊಂಡ ಚಾನೆಲ್‌ನ ಇನ್ನೊಬ್ಬ ಪತ್ರಕರ್ತ ಹಮಾಸ್‌  ಡೆಪ್ಯುಟಿ ಕಂಪನಿ ಕಮಾಂಡರ್ ಎಂದು ಹೇಳಿತ್ತು.

 

Share This Article