ಇಂದು ರಾತ್ರಿ ಸಿಐಡಿಯಲ್ಲೇ ಹೆಚ್‌.ಡಿ ರೇವಣ್ಣ ವಾಸ್ತವ್ಯ

Public TV
1 Min Read
REVANNA HOSPITAL

– ಇಸಿಜಿ ರಿಪೋರ್ಟ್‌ನಲ್ಲಿ ವ್ಯತ್ಯಾಸ

ಬೆಂಗಳೂರು: ಎಸ್‌ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಇಂದು ಸಿಐಡಿ ಕಚೇರಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಮಲಗಲು ಈಗಾಗಲೇ 2 ಹೊಸ ಬೆಡ್‌ ಹಾಗೂ ಬೆಡ್‌ಶೀಟ್‌ಗಳನ್ನು ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ.

BED

ಇದಕ್ಕೂ ಮುನ್ನ ಮೆಡಿಕಲ್‌ ಟೆಸ್ಟ್‌ಗಾಗಿ ಮಾಜಿ ಸಚಿವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ರೇವಣ್ಣಗೆ ಇಸಿಜಿ ಮಾಡಿದ್ದಾರೆ. ನಂತರ ಸಿಸಿಆರ್ ಯು ಘಟಕದಲ್ಲಿ ತಪಾಸಣೆ ನಡೆಸಲಾಯಿತು. ಅಲ್ಲದೇ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೂಡ ಮಾಡಲಾಯಿತು. ಮೆಡಿಕಲ್‌ ಟೆಸ್ಟ್‌ ಮುಗಿದ ಬಳಿಕ ಮತ್ತೆ ಸಿಐಡಿ ಕಚೇರಿಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು- ಹರ್ಷಿಕಾ ಆಗ್ರಹ

ಇಸಿಜಿ ರಿಪೋರ್ಟ್ ನಲ್ಲಿ ವ್ಯತ್ಯಾಸ: ಬೌರಿಂಗ್ ಆಸ್ಫತ್ರೆ ವೈದ್ಯರಿಂದ ರೇವಣ್ಣಗೆ ಇಸಿಜಿ ಮಾಡಲಾಗಿದೆ. ಈ ವೇಳೆ ಇಸಿಜಿ ರಿಪೋರ್ಟ್ ನಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಎಸ್ ಐಟಿ ಅಧಿಕಾರಿಗಳು ಜಯದೇವ ಆಸ್ಫತ್ರೆಗೆ ಅಥವಾ ಬೇರೆ ಆಸ್ಫತ್ರೆಯ ಕಾರ್ಡಿಯಾಲಾಜಿಸ್ಟ್ ವೈದ್ಯರಿಂದ ತಪಾಸಣೆ ಮಾಡಿಸುವ ಸಾಧ್ಯತೆಗಳಿವೆ. ಇಸಿಜಿ ಹೊರತುಪಡಿಸಿ ಎಲ್ಲಾ ಟೆಸ್ಟ್ ನಲ್ಲೂ ನಾರ್ಮಲ್ ಇದೆ.

HD REVANNA ARREST

ಭಾನುವಾರ ಬೆಳಗ್ಗೆ ರೇವಣ್ಣರಿಂದ ಹೇಳಿಕೆ ಪಡೆಯಲಿರುವ ಎಸ್ಐಟಿ ಅಧಿಕಾರಿಗಳು, ಸಂಜೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆಗಳಿವೆ.

Share This Article